ಎಂಇಎಸ್ ಶಾಸಕ ಸಂಭಾಜಿ ಹೇಳಿಕೆಗೆ ಖಂಡನೆ
ಹಾಸನ: ಬೆಳಗಾವಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಹೇಳಿಕೆಗೆ ಜಾವಗಲ್ನಲ್ಲಿ ಇತ್ತೀಚೆಗೆ ನಡೆದ ಕನ್ನಡ ರಾಜ್ಯೋತ್ಸವದ ಮುಕ್ತಾಯ ಸಮಾರಂಭದಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ಪತ್ರಕರ್ತ ವಸಂತ ಕುಮಾರ್ ಮಾತನಾಡಿ, ಸಂಭಾಜಿ ಪಾಟೀಲ್ ಹೇಳಿಕೆಯನ್ನು ಖಂಡಿಸಿ ರಾಜ್ಯಪಾಲರು ಕೂಡಲೇ ಅವರ ಶಾಸಕತ್ವವನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ಕನ್ನಡ ನಾಡು- ನುಡಿ ಬಗ್ಗೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಪುರಾತನ ಭಾಷೆಗಳಲ್ಲಿ ಆಗ್ರಸ್ಥಾನ ಗಳಿಸಿರುವ ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಎಪಿಎಂಸಿ ನಿರ್ದೇಶಕ ಕೆ.ಸಿ. ನಾಗರಾಜು, ಕರ್ನಾಟಕ ಜನಪದ ಪರಿಷತ್ ತಾಲೂಕು ಅಧ್ಯಕ್ಷ ಪ್ರಸನ್ನಕುಮಾರ್, ಹೋಬಳಿ ಅಧ್ಯಕ್ಷ ಕೃಷ್ಣಮೂರ್ತಿ, ಜೆ.ಎಸ್. ರವಿಶಂಕರ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್, ಎಸ್.ಡಿ.ಎಮ್.ಸಿ ಅಧ್ಯಕ್ಷ ಶ್ರೀನಿವಾಸ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಜೆ.ಡಿ ಪ್ರಕಾಶ್, ಜೆ.ಜಿ ಧರ್ಮೇಂದ್ರ, ದಯಾನಂದ್ ಇದ್ದರು.
ನೃತ್ಯ ಪ್ರದರ್ಶನದಲ್ಲಿ ಧನ್ಯ ನಿಕೇತನಶಾಲೆ ಪ್ರಥಮ ಹಾಗೂ ಮಾಡಲಲ್ಶಾಲೆ ದ್ವಿತೀಯ ಸ್ಥಾನ ಗಳಿಸಿದವು.