ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದೇವಸ್ಥಾನ, ಕೆರೆ ಜಾಗ ನಾಶ: ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

Rashmi Kasaragodu
Updated On : 2 Dec 2013, 11:16 am

ಕನ್ನಡಪ್ರಭ ವಾರ್ತೆ, ಹಾಸನ. ಡಿ 2
ಅಕ್ರಮವಾಗಿ ಗ್ರಾಮದ ದೇವಸ್ಥಾನದ ಗೋಮಾಳ ಮತ್ತು ಕೆರೆಯನ್ನು ನಾಶ ಮಾಡಿ ತೊಂದರೆ ನೀಡುತ್ತಿರುವ ಪವನಪುತ್ರ ರೆಸಾರ್ಟ್ ಹಾಗೂ ಕೆಐಎಡಿಬಿ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನಗರದ ಹೊರವಲಯದ ದೊಡ್ಡಬಸವನಹಳ್ಳಿ ಗ್ರಾಮಸ್ಥರು ಹಾಗೂ ಶ್ರೀರಂಗನಾಥಸ್ವಾಮಿ ಸೇವಾ ಟ್ರಸ್ಟ್ನ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ನಗರದ ಹೊರವಲಯದ ದೊಡ್ಡಬಸವನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೇ ನಂ.105ರಲ್ಲಿ 12.29 ಎಕರೆ ಕೆರೆ ಹಾಗೂ ಶ್ರೀರಂಗನಾಥಸ್ವಾಮಿಯ ದೇವಸ್ಥಾನವಿದ್ದು, ಇದು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಯೋಗವಾಗಿತ್ತು. ಜಾನುವಾರು ನೀರು ಕುಡಿಯಲು ಈ ಕೆರೆಯನ್ನೇ ಅವಲಂಭಿಸಿದ್ದವು. ಇಲ್ಲಿರುವ ದೇವಸ್ಥಾನ 300 ವರ್ಷಗಳಷ್ಟು ಹಳೆಯದಾಗಿದ್ದು, ಇತಿಹಾಸ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಈ ದೇವಾಲಯದಲ್ಲಿ ನಿತ್ಯ ಪೂಜೆ ಪುನಸ್ಕಾರಗಳನ್ನು ಮಾಡಿಕೊಂಡು ಬರಲಾಗುತ್ತಿತ್ತು.
ಈ ಜಾಗದಲ್ಲಿ ಹಲವಾರು ವರ್ಷಗಳಿಂದ ಗ್ರಾಮದ ಜಾನುವಾರುಗಳಿಗೆ ಮೇವಿಗೆ ಅನುಕೂಲವಾಗಿತ್ತು. ಅಲ್ಲದೆ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರತಿ ವರ್ಷವು ಜಾತ್ರೆ ನಡೆಸಲಾಗುತ್ತಿದೆ. ಸಾವಿರಾರು ಜನ ಜಾತ್ರೆಯಲ್ಲಿ ಭಾಗವಹಿಸಿ ಪೂಜೆ, ಹರಕೆಗಳನ್ನು ಸಲ್ಲಿಸುತ್ತಾರೆ. ಒಟ್ಟಿನಲ್ಲಿ 12.20 ಎಕರೆ ಪ್ರದೇಶದ ಗ್ರಾಮಸ್ಥರ ಉಪಯೋಗಕ್ಕೆ ಇತ್ತು. ಆದರೆ ಪವನಪುತ್ರ ರೆಸಾರ್ಟ್ನ ಸಿ.ಪಿ. ದಿವಾಕರ್ ಅವರು ಕಾನೂನು ಬಾಹಿರವಾಗಿ ಕೆಐಎಡಿಬಿಯಿಂದ ಈ ಜಮೀನನ್ನು ನೀಡಿದೆ ಎಂದು ಹೇಳಿ ಈ ಭಾಗದ ಗ್ರಾಮಸ್ಥರಿಗೆ ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ದೇವೇಗೌಡ, ಪಟೇಲಲ್ಶಾಮಣ್ಣ, ಮಧುಚಂದ್ರ, ಸ್ವಾಮಿ, ಮಂಜೇಗೌಡ, ಕೆಂಕೇಗೌಡ, ಗಿಡ್ಡಮ್ಮ, ಲಕ್ಷ್ಮಮ್ಮ, ಜಯಮ್ಮ, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಾನಕೆರೆ ಹೇಮಂತ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement