ಹಾಸನ

ಪಂಚಪೀಠಗಳು ಧರ್ಮ ಸಾರುವ ಕೇಂದ್ರಗಳು: ಜಗದ್ಗುರು ಶಿವಾಚಾರ್ಯ

ಅರಕಲಗೂಡು: ಪ್ರತಿ ವರ್ಷದಂತೆ ಕಾರ್ತಿಕ ಮಾಸದಲ್ಲಿ  ಜರುಗುವ ಕಡೆ ಕಾರ್ತಿಕ ಸೋಮವಾರ ದಿವಸ ರಾಮನಾಥಪುರ ಹೋಬಳಿ ಬಸವಪಟ್ಟಣ ಪಟ್ಟಣದ ಶ್ರೀ ಷಡ್ಭವರಹಿತೇಶ್ವರಸ್ವಾಮಿ ಯುವಕ ಸಂಘದವರು 18 ವರ್ಷಗಳಿಂದ ಅಚರಿಸಿಕೊಂಡು ಬರುತ್ತಿದ್ದು ವಿಶ್ವದ ಪಂಚಪೀಠಗಳಲ್ಲಿ ಒಂದಾಗಿರುವ ಜಗದ್ಗುರು ಶ್ರೀ ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಬಸವಾಪಟ್ಟಣದಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಶ್ರೀಗಳವರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭವ್ಯವಾದ ಮುತ್ತಿನ ಪಲ್ಲಕ್ಕಿಯಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಈ ವೇಳೆ ವೀರಗಾಸೆ, ನಂದಿದ್ವಜ, ಮಂಗಳವಾಧ್ಯ ಸಮೇತ ಶ್ರೀ ಷಡ್ಭವರಹಿತೇಶ್ವರಸ್ವಾಮಿ ದೇವಸ್ಥಾನದ ಸಭಾ ಕಾರ್ಯಕ್ರಮದ ಅವರಣದವರೆವಿಗೆ ಪಲ್ಲಕ್ಕಿ ಉತ್ಸವ ಜರುಗಿತು.
ಕೆ.ಅರ್.ನಗರ ತಾಲ್ಲೂಕು ಕರ್ಪೂರವಳ್ಳಿ  ಜಂಗಮಠದ ಶ್ರೀ ಚಂದ್ರಶೇಖರ ಶಿವಚಾರ್ಯಸ್ವಾಮೀಜಿ, ಕೆ.ಅರ್. ಪೇಟೆ ಗವಿಮಠದ ಶ್ರೀ ಸ್ವಾತಂತ್ರ ಬಸವಲಿಂಗಸ್ವಾಮೀಜಿ, ಕರ್ತಾಳು ಹಿರೇಮಠ ಶ್ರೀ ರೇಣುಕಾ ರಾಜಶೇಖರ ಶಿವಚಾರ್ಯಸ್ವಾಮೀಜಿ, ಚುಲುಮೆ ಮಠ ಶ್ರೀ ಜಯದೇವಸ್ವಾಮೀಜಿ, ಕೆಸವತ್ತೂರು ಸಿದ್ದಲಿಂಗೇಶ್ವರ ಮಠ ಬಸವರಾಜೇಂದ್ರಸ್ವಾಮೀಜಿ, ತೊರೇನೂರು ಮಠದ ಶ್ರೀ ಮಲ್ಲೇಶಸ್ವಾಮೀಜಿ, ಶ್ರೀ ಷಡ್ಭವರಹಿತೇಶ್ವರಸ್ವಾಮಿ ಯುವಕ ಸಂಘದವರು, ಮುಖಂಡರು ಉತ್ಸವದಲ್ಲಿ ಭಾಗವಹಿಸಿದ್ದರು.                                                                  
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಗಳು  ವೀರಶೈವ ಧರ್ಮ ಸಮಾನತೆಯ ಧರ್ಮವಾಗಿದ್ದು, ಶಾಂತಿ ಮಂತ್ರ ಅನುಷ್ಠಾನಗೊಳಿಸುವ ಸಾಧನವಾಗಿದೆ. ಕಾರ್ತಿಕ ಮಾಸದಲ್ಲಿ ಅಚರಿಸುವ ಅರಾಧನೆಗೆ ಮೀಸಲಿಟ್ಟು ದೇಶದಲ್ಲಿ ಸುಖ, ಶಾಂತಿ, ಲಭಿಸಲಿ ಎಂದು ಶ್ರೀಮದದ್ಹಿಮವತ್ಕೇದಾರ ಜಗದ್ದುರು ಶ್ರೀ ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಹಾರೈಸಿದರು.
ಪ್ರಚಾರ ಪೀಠಗಳಲ್ಲ: ವೀರಶೈವ ಧರ್ಮ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದ ತುಂಬೆಲ್ಲಾ ಹಬ್ಬಿದೆ. ವೀರಶೈವ ಧರ್ಮದ ಪಂಚಪೀಠಗಳು ಪ್ರಚಾರ ಪೀಠಗಳಲ್ಲ.
ಧರ್ಮ ಸಾರುವ ತಾಣಗಳು, ಮನುಷ್ಯ ದೇವರು ಮತ್ತು ಧರ್ಮವನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದ ಅವರು 12ನೇ ಶತಮಾನದಲ್ಲಿ ವೀರಶೈವ ಧರ್ಮಕ್ಕೆ ಪುನರುಜ್ಜೀವ ನೀಡಿದ ಬಸವಣ್ಣನವರು ಮತ್ತು ಶರಣರು ತಮ್ಮ ಅಚ್ಚ ಕನ್ನಡದಲ್ಲಿ ವಚನಗಳನ್ನು ರಚನೆ ಮಾಡುವ ಮೂಲಕ ವಿಶ್ವಕ್ಕೆ ಅನನ್ಯ ಸಂದೇಶ ನೀಡಿದ್ದಾರೆ ಎಂದರು.
ಚುಲುಮೆ ಮಠ ಶ್ರೀ ಜಯದೇವಸ್ವಾಮೀಜಿ, ಕೆ.ಅರ್.ನಗರ ತಾಲ್ಲೂಕು ಕರ್ಪೂರವಳ್ಳಿ  ಜಂಗಮಠದ ಶ್ರೀ ಚಂದ್ರಶೇಖರ ಶಿವಚಾರ್ಯಸ್ವಾಮೀಜಿ ಕೆ.ಅರ್. ಪೇಟೆ ಗವಿಮಠದ ಶ್ರೀ ಸ್ವಾತಂತ್ರ ಬಸವಲಿಂಗಸ್ವಾಮೀಜಿ, ಕರ್ತಾಳು ಹಿರೇಮಠ ಶ್ರೀ ರೇಣುಕಾ ರಾಜಶೇಖರ ಶಿವಚಾರ್ಯಸ್ವಾಮೀಜಿ, ಸಮಾಜದ ಮುಖಂಡರಾದ ಸುಬ್ಬಣ್ಣ, ಬಸವರಾಜ್, ಕುಮಾರ್, ಯೋಗೇಶ್ ಮುಂತಾದವರು ಉತ್ಸವದಲ್ಲಿ ಭಾಗವಹಿಸಿದ್ದರು. ಶಾಂತಮಲ್ಲಪ್ಪ ಸ್ವಾಗತಿಸಿ ವಂದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳದ 15 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ: ಚುನಾವಣಾ ಆಯೋಗ ಆದೇಶ!

ಮದ್ಯಪಾನ ಮಾಡಿ ವಿಧಾನಸಭೆಗೆ ಬಂದ್ರಾ ಪಂಜಾಬ್ ಸಿಎಂ ಭಗವಂತ್ ಮಾನ್? ಡೋಪ್ ಪರೀಕ್ಷೆಗೆ ವಿಪಕ್ಷಗಳ ಒತ್ತಾಯ; Video

ಡಿಸಿಎಂ DKS ಪುತ್ರಿಗೆ ಹೆಣ್ಣು ಮಗು ಜನನ: ತಾತನಾದ ಖುಷಿ; ಆಸ್ಪತ್ರೆಗೆ ದೌಡಾಯಿಸಿದ ಡಿ.ಕೆ ಶಿವಕುಮಾರ್

Tamilnadu: ರಾಜಕೀಯ ದ್ವೇಷ, ಟಿವಿಕೆ ಪ್ರಚಾರ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ರಾಹುಲ್ ಗಾಂಧಿಗೆ ಅಲಹಾಬಾದ್ ಹೈಕೋರ್ಟ್ ಬಿಗ್ ರಿಲೀಫ್!

SCROLL FOR NEXT