ಪೊಲೀಸ್ ಇಲಾಖೆ ಹೊಸ ಕ್ರಮ: 6 ಕಡೆ ದೂರು ಪೆಟ್ಟಿಗೆ
ಹೊಳೆನರಸೀಪುರ: ಪಟ್ಟಣದ ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ವಿಚಾರದಲ್ಲಿ ಇಲಾಖೆ ಸರಳೀಕರಣಗೊಳಿಸಿದ್ದು ಅದರಂತೆ ಪಟ್ಟಣದ ಆರು ಕಡೆ ದೂರು ಪೆಟ್ಟಿಗೆಯನ್ನು ಆಳವಡಿಸಲಾಗಿದೆಂದು ನಗರಠಾಣಾ ಪಿಎಸ್ಐ ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಸ್ತುತ ಪೊಲೀಸ್ ಇಲಾಖೆ, ಸಾರ್ವಜನಿಕರು ತಮ್ಮ ದೂರುಗಳನ್ನು ಈ ಮೊದಲು ನೇರವಾಗಿ ಠಾಣೆಗೆ ಆಗಮಿಸಿ ನೀಡುವ ಪದ್ಧತಿ ಇತ್ತು. ಆದರೆ ದೂರುದಾರರಿಗೆ ಕಾಲಾವಕಾಶ ಕಡಿಮೆ ಇರುವ ದೂರುದಾರರು ತಮ್ಮ ಇಲಾಖೆ ಆಳವಡಿಸಿರುವ ದೂರು ಪೆಟ್ಟಿಗೆಯನ್ನು ತಮ್ಮ ಲಿಖಿತ ದೂರುಗಳನ್ನು ಪೆಟ್ಟಿಗೆಯಲ್ಲಿ ಹಾಕಿದ್ದಲ್ಲಿ ಇಲಾಖೆ ಆ ದೂರುಗಳನ್ನು ನಿತ್ಯವು ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿರುವ ಅವರು ದೂರುಗಳನ್ನು ಪೆಟ್ಟಿಗೆಯಲ್ಲಿ ಹಾಕಿದ ನಂತರ ಇಲಾಖೆ ನಿಗದಿಪಡಿಸಿರುವ ಮೊಬೈಲ್ ದೂರವಾಣಿಯಲ್ಲಿ ತಿಳಿಸುವ ಅವಕಾಶ ಇದೆ ಎಂಬುದಕ್ಕೆ ಪೆಟ್ಟಿಗೆ ಮೇಲೆ ದೂರವಾಣಿ ಸಂಖ್ಯೆಯನ್ನು ದಾಖಲಿಸಲಾಗಿದೆ. ಪೊಲೀಸ್ ಇಲಾಖೆ ನೀಡಿರುವ ಈ ಸವಲತ್ತುಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಪ್ರಸ್ತುತ ಪಟ್ಟಣದ ಬಸ್ನಿಲ್ದಾಣದ ಟ್ರಾಫಿಕ್ ಕಂಟ್ರೋಲರ್ ಕೊಠಡಿಯ ಪಕ್ಕದಲ್ಲಿ ಆಳವಡಿಸಲಾಗಿದೆ ಎಂದಿದ್ದಾರೆ.