ಅಕೌಂಟಿಂಗ್ ಥಿಯರಿ ವಿಶೇಷ ಉಪನ್ಯಾಸ ಕಾರ್ಯಕ್ರಮ
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ.3
ಪಟ್ಟಣದ ಮಹಿಳಾ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಕೇಂದ್ರದ ಎಂ.ಕಾಂ ವಿದ್ಯಾರ್ಥಿನಿಯರಿಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.
ಡಾ. ಎಸ್. ಮರೀಗೌಡ ಮುಖ್ಯಸ್ಥರು ಸ್ನಾತಕೋತ್ತರ ಕೇಂದ್ರ ವಿದ್ಯಾವರ್ಧಕ ಕಾಲೇಜು ಮೈಸೂರು, ಇವರು ಅಕೌಂಟಿಂಗ್ ಥಿಯರಿ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ರಾಜಶೇಖರ್.ಜಿ, ಪ್ರೊ. ಚಂದ್ರಕುಮಾರ್, ಪ್ರೊ. ಎಚ್.ಎಸ್. ರಮೇಶ್ ಇದ್ದರು.