ಅತ್ತೆ, ಸಂಬಂಧಿಕರಿಂದ ಕಿರುಕುಳ: ಪತ್ನಿ ಆರೋಪ
ಹಾಸನ: ಪತಿಯ ಆಸ್ತಿಗಾಗಿ ಅತ್ತೆ ಮತ್ತು ಸೋದರ ಮಾವಂದರು ಕಿರುಕುಳ ನೀಡುತ್ತಿರುವುದಾಗಿ ಅಕಲಗೂಡು ತಾಲೂಕಿನ ಹೆಗ್ಗಡಹಳ್ಳಿಯ ಮೃತ ಕುಮಾರ್ ಪತ್ನಿ ಕಮಲ ಅಲವತ್ತುಕೊಂಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಲ, ಪತಿ ಕುಮಾರ್ ಕಳೆದ ಜೂ. 1ರಂದು ಮನೆಯ ಮೇಲಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ್ದರು. ಆದರೆ ಗ್ರಾಮಸ್ಥರು ನಾನೇ ಪತಿಯನ್ನು ಕೊಲೆ ಮಾಡಿದ್ದೇನೆ ಎಂದು ಅರಕಲಗೂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಆಸ್ತಿಗಾಗಿ ಪತಿಯ ತಾಯಿ ಹಾಗೂ ಸೋದರ ಮಾವಂದಿರು ಇಲ್ಲಸಲ್ಲದ ಆರೋಪ ಮಾಡಿ ಮನೆಯಿಂದ ಹೊರಹಾಕಿ ನನಗೆ ಹಾಗೂ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ಇದು ಆಕಸ್ಮಿಕ ಸಾವು ಎಂದು ಪ್ರಕರಣ ಇತ್ಯರ್ಥಗೊಂಡಿದೆ. ಆದರೆ ಪತಿಯ ತಾಯಿ ಹಾಗೂ ಸೋದರ ಮಾವಂದಿರು ನೀನು ಬೇರೆಯವರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಕುಮಾರ್ನನ್ನು ಕೊಲೆ ಮಾಡಿಸಿನೀಯ ಎಂದು ದಿನನಿತ್ಯ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ. ಇತ್ತ ತಾಯಿಯ ಮನೆಗೆ ಹೋದರೆ ಅಲ್ಲಿ ಬಾಳಲು ಊರಿನವರ ಚುಚ್ಚು ಮಾತುಗಳಿಂದ ಅಲ್ಲಿಯೂ ಬಾಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಈ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದರು.