ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆರೋಗ್ಯ ಕಾರ್ಯಕ್ರಮ

Rashmi Kasaragodu
Updated On : 4 Dec 2013, 12:37 pm

ಆಲೂರು: ನೇರವಾಗಿ ಮರಿಗಳಿಗೆ ಜನ್ಮ ನೀಡುವ ಪ್ರಾಣಿಗಳು ತಮ್ಮ ದೇಹದಲ್ಲೇ ಉತ್ಪಾದಿಸುವ  ದ್ರವ ರೂಪವೇ ಹಾಲು ಎಂದು ಕೆಎಂಎಫ್ ಸಹಾಯಕ ವ್ಯವಸ್ಥಾಪಕ ಹೆಚ್.ವಿ. ಗೋಪಾಲ್ ತಿಳಿಸಿದರು. ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಪಟ್ಟಣದ  ಎನ್ಹೆಚ್ಪಿಎಸ್ ಶಾಲೆಯಲ್ಲಿ ಏರ್ಪಡಿಸಿದ್ದ ಹಾಲು ಮತ್ತು ಆರೋಗ್ಯ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡಿದ ಅವರು, ಹಾಲಿನ ಉಪಯೋಗಗಳು ವಿಷಯ ಕುರಿತು  ವಿವರಿಸುತ್ತಾ ಪೌಷ್ಟಿಕಾಂಶಗಳಿಂದ ಕೂಡಿದ್ದು ಮನುಷ್ಯನ ಆರೋಗ್ಯಕ್ಕೆ ಉತ್ತಮವಾದದು ಎಂದರು. ಹಾಸನ ಹಾಲು ಒಕ್ಕೂಟ 250 ಲೀ. ಹಾಲಿನಿಂದ ಆರಂಭವಾಗಿ ಪ್ರಸ್ತುತ 7 ಲಕ್ಷ ಲೀಟರ್ವರೆಗೆ ಪ್ರಗತಿ ಸಾಧಿಸಿತೆಂದು ಹೇಳಿದರು. ಕಸಾಪ ತಾಲ್ಲೂಕು ಅಧ್ಯಕ್ಷ  ಗುಲಾಂಸತ್ತಾರ್ ಮಾತನಾಡಿ, ಹಾಲು ಪವಿತ್ರವಾದುದು ಮಕ್ಕಳ ಬೆಳವಣಿಗೆಗೆ ಬಹಳ ಸಹಕಾರಿಯಾಗಿದೆ ಎಂದು ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement