ಎಪಿಎಂಸಿ ನಿರ್ದೇಶಕರಾಗಿ ಕುಮಾರ್
ಹಾಸನ: ತೆರವಾಗಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಸಾಲಗಾಮೆ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಡಿ.ಸಿ.ಕುಮಾರ್ ಮಂಗಳವಾರ ಆಯ್ಕೆಯಾಗಿದ್ದಾರೆ. ತಾಲೂಕಿನ ಸಾಲಗಾಮೆ ಕ್ಷೇತ್ರದ ಚಂದ್ರಹಾಸ್ ಅವರು ನಿರ್ದೇಶನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಸ್ಥಾನಕ್ಕೆ ಕಳೆದ ಭಾನುವಾರ ಚುನಾವಣೆ ನಡೆದಿತ್ತು. ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಕುಮಾರ್ ಅವರು 185 ಮತಗಳ ಅಂತರಿಂದ ಪ್ರತಿಸ್ಪರ್ಧಿಯಾಗಿದ್ದ ನಂಜುಂಡಪ್ಪನವರನ್ನು ಸೋಲಿಸುವ ಮೂಲಕ ನಿರ್ದೇಶಕರಾಗಿ ಆಯ್ಕೆಗೊಂಡಿದ್ದಾರೆ. ಇವರಿಗೆ ಶಾಸಕ ಎಚ್.ಎಸ್.ಪ್ರಕಾಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಆರ್. ಸತ್ಯನಾರಾಯಣ್, ಜೆಡಿಎಸ್ ಮುಖಂಡ ದೇವೇಂದ್ರ ಹಾಗೂ ಇತರರು ಅಭಿನಂದಿಸಿದ್ದಾರೆ.