ಆಲೂರಲ್ಲಿ 547 ಪ್ರಕರಣ ಇತ್ಯರ್ಥ, ನಾಲ್ಕನೇ ಸ್ಥಾನ
ಆಲೂರು: ಪಟ್ಟಣದಲ್ಲಿ ಸೆಪ್ಟೆಂಬರ್ 9 ರಿಂದ ನ. 23 ರವರೆಗೆ ನಡೆದ ಬೃಹತ್ ಜನತಾ ನ್ಯಾಯಾಲಯದಲ್ಲಿ 547 ಪ್ರಕರಣಗಳು ಇತ್ಯರ್ಥಗೊಂಡಿದ್ದು, ಜಿಲ್ಲೆಗೆ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ರಾಜಿ ಸಂಧಾನಕ್ಕೆ ಕಕ್ಷಿದಾರರು, ವಕೀಲರು ಸಹಕಾರ ನೀಡಿದ್ದು, ಶ್ಲಾಘನೀಯ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಮತ್ತು ಕೆಎಂಎಫ್ಸಿ ನ್ಯಾಯಾಧೀಶ ಎಂ.ಮಹೇಶ್ಬಾಬು ತಿಳಿಸಿದ್ದಾರೆ.
ಇಂದು, ನಾಳೆ ಪ್ರತಿಭಾ ಕಾರಂಜಿ
ಆಲೂರು: ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಡಿ.5 ಹಾಗೂ 6 ರಂದು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಡಿ.5 ರಂದು ಬೆಳಗ್ಗೆ 10 ಕ್ಕೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ತಿಳಿಸಿದ್ದಾರೆ.