ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದಿನ ವೈಜ್ಞಾನಿಕ ಯುಗದಲ್ಲಿ ಒತ್ತಡದಲ್ಲಿ ಬದುಕುವ ಪರಿಸ್ಥಿತಿ: ಭಾರತಿ

Rashmi Kasaragodu
Updated On : 5 Dec 2013, 12:58 pm

ಅರಸೀಕೆರೆ: ವೈಜ್ಞಾನಿಕ ಯುಗದಲ್ಲಿ ಮನುಷ್ಯ ತನ್ನ ವೈಜ್ಞಾನಿಕ ಆವಿಷ್ಕಾರಗಳಿಂದ ಜೀವನವನ್ನು ಸರಳಗೊಳಿಸಿಕೊಂಡಿದ್ದಾನಾದರೂ, ಒತ್ತಡದಲ್ಲಿ ಬದುಕುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದಾನೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಸಮಾಜದ ಕುಮಾರಿ ಬಿ.ಕೆ. ಭಾರತಿ ಹೇಳಿದರು.
 ಪಟ್ಟಣದ ನ್ಯಾಯಾಲಯದ ಆವರಣದಲ್ಲಿನ ವಕೀಲರ ಸಂಘದ ಭವನದಲ್ಲಿ ಇತ್ತೀಚೆಗೆ ಕಾನೂನು ದಿನಾಚರಣೆ ಅಂಗವಾಗಿ ವಕೀಲರ ಸಂಘ ಆಯೋಜಿಸಿದ್ದ ಒತ್ತಡದ ಮುಕ್ತ ಜೀವನಕ್ಕಾಗಿ ಸಹಜ ರಾಜಯೋಗ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಹಕ್ಕಿಗಳಂತೆ ಹಾರುವುದನ್ನು ಕಲಿತ, ಮೀನಿನಂತೆ ನೀರಿನಲ್ಲಿ ಈಜುವುದನ್ನು ಕಲಿತ, ಪ್ರತಿನಿತ್ಯ ವೂ ಒತ್ತಡದಲ್ಲಿ ಬದುಕುತ್ತಿದ್ದಾನೆ ಎಂದು ತಿಳಿಸಿದರು.
ಮೌಲ್ಯಗಳ ಅಧಃಪತನ: ಆಧುನಿಕತೆ ಜೀವನಕ್ಕೆ ಮನುಷ್ಯ ಮಾರುಹೋಗಿ ಮಾನವೀಯ ಮೌಲ್ಯಗಳನ್ನೇ ಮರೆತಿದ್ದಾನೆ ಎಂದ ಅವರು, ಮನಸ್ಸು ಮನಸ್ಸುಗಳ ನಡುವಿನ ಸಂಬಂಧಗಳ ಕೊಂಡಿ ಕಳಚಿಕೊಳ್ಳುತ್ತಿರುವುದರಿಂದ ಇದು ಕೌಟುಂಬಿಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದರು.
ಅಪರ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಚೆನ್ನಪ್ಪ ಕುರುಬೆಟ್, ಸರ್ಕಾರಿ ಸಹಾಯಕ ವಕೀಲ  ಮಮತ, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಸ್.ಎನ್. ಸುಬ್ಬಣ್ಣ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement