ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರಾಥಮಿಕ ಶಾಲೆಯಲ್ಲಿ ವಿಶ್ವವಿಕಲಚೇತನ ದಿನ

Rashmi Kasaragodu
Updated On : 5 Dec 2013, 12:56 pm

ಕ.ಪ್ರ.ವಾರ್ತೆ    ಹೊಳೆನರಸೀಪುರ    ಡಿ.4
ಪಟ್ಟಣದ ಕೋಟೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವವಿಕಲ ಚೇತನರ ದಿನಾಚರಣೆ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶಿವಮಾದಪ್ಪ ಕಾರ್ಯಕ್ರಮ ಉದ್ಘಾಟಿಸಿ, ಪ್ರಸ್ತುತ ನಾವು ಬಳಸುವ ಆಹಾರ ಪದ್ಧತಿ ಮತ್ತು ಅತಿಯಾದ ಔಷಧಿಗಳಿಂದ ನಮ್ಮಲ್ಲಿರುವಂತಹ ಹಲವಾರು ನ್ಯೂನತೆಗಳು ಮಗುವಿನ ನ್ಯೂನತೆಗೆ ಕಾರಣವಾಗಿದೆ. ಇದರ ಪ್ರಭಾವದಿಂದ ಮಗುವಿನ ಶಾರೀರಿಕ, ಮಾನಸಿಕ ದೌರ್ಬಲ್ಯ ಉಂಟಾಗಿದೆ ಎಂದು ಹೇಳಿದರು.
ಇತರ ಮಕ್ಕಳಂತೆ ಅಂಗವಿಕಲ ಮಕ್ಕಳು ಹಲವಾರು ಕ್ರೀಡೆಗಳಲ್ಲಿ ಭಾಗವಹಿಸಿ, ಬಹುಮಾನ ಪಡೆದುಕೊಳ್ಳುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಪೋಷಕರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ, ನಿಮ್ಮ ಮಕ್ಕಳು ಇಲ್ಲಿ ಹೇಗೆ ಪಂದ್ಯದಲ್ಲಿ ಭಾಗವಹಿಸಲು ಕರೆ ತಂದಿದ್ದಾರೋ ಹಾಗೆಯೇ ಮನೆಯಲ್ಲಿ ಅವರಿಗೆ ಉತ್ತಮ ಅವಕಾಶ ಕಲ್ಪಿಸಿ ಅವರು ಅಶಕ್ತರು ಎಂಬ ಭಾವನೆ ಮೂಡದಂತೆ ನೋಡಿಕೊಳ್ಳಿ ಎಂದು ಹೇಳಿದರು.
ಈ ಸಂದದಲ್ಲಿ ಅಂಗವಿಕಲ ವಿದ್ಯಾರ್ಥಿಯೊಬ್ಬ ಸ್ವಾಗತ ಭಾಷಣ ಮಾಡಿದ್ದು ಸಭಿಕರಿಗೆಲ್ಲ ಸಂತಸ ಮೂಡಿಸಿತು. ಪಂದ್ಯದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು. ಬಿಆರ್ಸಿ ಕುಮಾರ್, ಸಹಾಯಕ ನಿರ್ದೇಶಕ ಅಕ್ಷರದಾಸೋಹ ಡಿ.ಆರ್.ಕುಮಾರ್, ಜಿಲ್ಲಾ ಐಇಆರ್ಟಿ ಹಾಸನ ತಿಮೇಶ್, ಪಿ.ಇ.ಓ. ಹೊಳೆನರಸೀಪುರ, ಎಸ್.ಎನ್.ನಾಗರಾಜ್, ಮುಖ್ಯ ಶಿಕ್ಷಕಿ ಎಚ್.ಎಂ. ಪ್ರಭಾವತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement