ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶ್ರೀಗಳ ಇಷ್ಟಲಿಂಗ ಪೂಜೆ, ಸನ್ಮಾನ ಕಾರ್ಯಕ್ರಮ

Rashmi Kasaragodu
Updated On : 5 Dec 2013, 12:55 pm

ಕ.ಪ್ರ.ವಾರ್ತೆ    ರಾಮನಾಥಪುರ    ಡಿ. 4
ರಾಮನಾಥಪುರ: ಸಮೀಪದ ಬಸವಾಪಟ್ಟಣದ ಷಡ್ಭಾವ ರಹಿತೇಶ್ವರ ದೇವಸ್ಥಾನದ ಆವರಣದಲ್ಲಿ ಪಂಚ ಪೀಠಗಳಲ್ಲಿ ಒಂದಾದ ಕೇದಾರ ಮಠದ ಶ್ರೀ ಭೀಮಶಂಕರ ಶಿವಾಚಾರ್ಯ ಭಗವತ್ಪಾದರ ಇಷ್ಟ ಲಿಂಗ ಪೂಜಾ ಕಾರ್ಯಕ್ರಮ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಇಷ್ಟಲಿಂಗ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತ ಭಾವನೆ ಅನುಭವಿಸಿದರು.  
ಇದೇ ವೇಳೆ ಕಾರ್ಯಕ್ರಮದ ಬಗ್ಗೆ ಮಾರ್ಗದರ್ಶನ ನೀಡಿದ ಟಿ.ಟಿ. ಮಹೇಶ್, ಟಿ.ಸಿ. ಆದಪ್ಪಶೆಟ್ಟಿ, ಟಿ.ಸಿ. ಅಂಬರೀಷ್, ಟಿ.ಸಿ. ಉದಯ್ಕುಮಾರ್, ಜಗದೀಶ್, ಬಿ.ಸಿ. ಗಂಗಾಧರಶೆಟ್ಟಿ, ಬಿ.ಸಿ. ನಂಜುಂಡಶೆಟ್ಟಿ ಮತ್ತು ಬಿ.ಎಸ್. ಚನ್ನಪ್ಪಶೆಟ್ಟಿ ಇನ್ನು ಹಲವಾರು ಸಮಾಜ ಬಂಧುಗಳನ್ನು ಸನ್ಮಾನಿಸಲಾಯಿತು. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement