15ರಂದು ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನ
ಕ.ಪ್ರ.ವಾರ್ತೆ ಹಾಸನ ಡಿ. 5
ನಗರದಲ್ಲಿ 1 ನೇ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನವನ್ನು ದಲಿತ ಸಾಹಿತ್ಯ ಪರಿಷತ್ವ್‌ತಿಯಿಂದ ಡಿ.15ರಂದು ನಡೆಯಲಿದೆ ಎಂದು ದಸಾಪ ಜಿಲ್ಲಾಧ್ಯಕ್ಷ ನಾಗರಾಜ್ ಹೆತ್ತೂರು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ದುದ್ದ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕ್ರಮವನ್ನು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಉದ್ಘಾಟಿಸಲಿದ್ದಾರೆ. ಜಿಲ್ಲಾಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪನವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಪುಸ್ತಕ ಮಹಿಳೆ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಅಂಬೇಡ್ಕರ್ ಭಾವಚಿತ್ರ ಅನಾವರಣಗೊಳಿಸಿಲಿದ್ದಾರೆ.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಶಾಸಕ ಎಚ್.ಎಸ್.ಪ್ರಕಾಶ್, ವಿಧಾನ ಪರಿಷತ್ಸ್‌ದಸ್ಯ ಪಟೇಲಲ್ಶಿವರಾಂ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಬೆಳಗ್ಗೆ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಮುಖ್ಯಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರಪ್ರತಾಪ್ ಸಿಂಗ್ ಭಾಗವಹಿಸಲಿದ್ದಾರೆ. ನಂತರ ಜಿಲ್ಲಾಧಿಕಾರಿ ಕಚೇರಿಯಿಂದ ಮೆರವಣಿಗೆ ನಡೆಯಲಿದೆ ಎಂದರು.
ಬೂಸಾ ಸಾಹಿತ್ಯಕ್ಕೆ 40 ವರ್ಷ ಒಂದು ಚಿಂತನೆಯ ಗೋಷ್ಠಿ ನಡೆಯಲಿದ್ದು, ಅಂತರರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅಧ್ಯಕ್ಷತೆ ವಹಿಸಲಿದ್ದಾರೆ. ದಸಂಸ ಜಿಲ್ಲಾ ಸಂಚಾಲಕ ಕೃಷ್ಣದಾಸ್ ಆಶಯ ನುಡಿ, ಸಮತಾ ಸೈನಿಕ ದಳ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಹಾಗೂ ವಿಚಾರವಾದಿ ರುದ್ರಸ್ವಾಮಿ ಉಪನ್ಯಾಸ ನೀಡಲಿದ್ದಾರೆ. ಎರಡನೇ ಗೋಷ್ಠಿಯು ದಲಿತ ಚಳುವಳಿ ಮತ್ತು ಮಹಿಳೆ ಎಂಬ ವಿಚಾರ ಕುರಿತು ನಡೆಯಲಿದೆ. ದಸಂಸ ಮೊದಲ ಮಹಿಳಾ ಅಧ್ಯಕ್ಷೆ ಕೆ.ಗಂಗಮ್ಮ ಅಧ್ಯಕ್ಷತೆವಹಿಸಲಿದ್ದಾರೆ. ಸಾಹಿತಿ ಬಾನು ಮುಷ್ತಾಕ್ ಆಶಯ ನುಡಿಯಲಿದ್ದು, ಸಾಹಿತಿ ಸಮತಾ ದೇಶಮಾನೆ, ಮಹಿಳಾ ಹೋರಾಟಗಾರ್ತಿ ದು.ಸರಸ್ವತಿ, ಎಸ್ ಎಸ್ ಡಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅನುಸೂಯ ಕಾಂಬಳೆ ಉಪನ್ಯಾಸ ನೀಡಲಿದ್ದಾರೆ.
ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಗಂಗೂಬಾಯಿ ಹಾನಗಲಲ್ಸಂಗೀತ ವಿಶ್ವವಿದ್ಯಾನಿಲಯ ಉಪಕುಲಪತಿ ಡಾ.ಎಂ.ಎಸ್. ಶೇಖರ್ ವಹಿಸಲಿದ್ದಾರೆ. ಕವಿ ಹರೀಶ್ಕ್‌ಟ್ಟೆ ಬೆಳಗುಲಿ ಆಶಯ ನುಡಿಯಲಿದ್ದಾರೆ. ಕವಿ ಸುಬ್ಬು ಹೊಲೆಯಾರ್ ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ದಸಂಸ ದ ಮಾವಳ್ಳಿ ಶಂಕರ್ ಸಮಾರೋಪ ನುಡಿಯಲಿದ್ದಾರೆ. ನಂತರ ದಿ ಗೋವಿಂದದಾಸ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ನಾರಾಯಣದಾಸ್, ಪರಿಷತ್ನ್ ಉಪಾಧ್ಯಕ್ಷ ಆರರ್ಪಿ ಐ ಸತೀಶ್, ಕಾರ್ಯದರ್ಶಿ ವೆಂಕಟೇಶ್ ಬೈಕರವಳ್ಳಿ, ಪ್ರಧಾನ ಕಾರ್ಯದರ್ಶಿ ಉಳುವಾರೆ ಪ್ರಕಾಶ್, ಜಿಲ್ಲಾ ಸಂಚಾಲಕಿ ಸಿ. ಸುವರ್ಣ ಇದ್ದರು.