350 ವರ್ಷಗಳ ಇತಿಹಾಸದ ಕುಂದೂರು ಮಠ ಹಸ್ತಾಂತರ
ಚನ್ನರಾಯಪಟ್ಟಣ: ಒಕ್ಕಲಿಗರ ಪ್ರಥಮ ಮಠವೆಂದು ಕರೆಯಲ್ಪಡುವ, 350ಕ್ಕೂ ವರ್ಷಗಳ ಇತಿಹಾಸವಿರುವ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರು ಮಠವನ್ನು ಶ್ರೀ ಆದಿಚುಂಚನಗಿರಿ ಮಠದ ಆಧೀನದಲ್ಲಿರುವ ಆದಿಶಕ್ತಿ ಮೆಳಿಯಮ್ಮ ಟ್ರಸ್ಟ್‌ಗೆ ಗುರುವಾರ ಹಸ್ತಾಂತರಿಸಲಾಯಿತು.
ಗುರುವಾರ ಮಧ್ಯಾಹ್ನ ಕುಂದೂರು ಮಠದ ರಾಮಯ್ಯ ಪರದೇಶಿ ಸ್ವಾಮೀಜಿ ಅವರು ಮಠ ಸೇರಿದಂತೆ 240ಕ್ಕೂ ಹೆಚ್ಚು ಎಕರೆ ಭೂಮಿ ಹಾಗೂ ದೇವಾಲಯದ ಉಸ್ತುವಾರಿಯನ್ನು ಟ್ರಸ್ಟ್‌ಗೆ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಹಸ್ತಾಂತರಿಸಿದರು.
ಆದಿಚುಂಚನಗಿರಿ ಮಠಾದೀಶರಾದ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ ಈ ಸಂದರ್ಭದಲ್ಲಿ ಹಾಜರಿದ್ದರು. ಕುಂದೂರು ಗ್ರಾಮದ ಜನತೆ ರಾಮಯ್ಯ ಪರದೇಶಿ ಸ್ವಾಮೀಜಿ ಅವರೊಂದಿಗೆ ಆಗಮಿಸಿ ಮಠದ ಉಸ್ತುವಾರಿಯನ್ನು ಆದಿಚುಂಚನಗಿರಿ ಮಠಕ್ಕೆ ವಹಿಸಿದರು.