ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕುಂದೂರು ಮಠ ಹಸ್ತಾಂತರ

Mainashree
Updated On : 5 Dec 2013, 9:53 am

ಚನ್ನರಾಯಪಟ್ಟಣ: ಒಕ್ಕಲಿಗರ ಪ್ರಥಮ ಮಠವೆಂದು ಕರೆಯಲ್ಪಡುತ್ತಿರುವ 350ಕ್ಕೂ ವರ್ಷಗಳ ಇತಿಹಾಸವಿರುವ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕುಂದೂರು ಮಠವನ್ನು ಶ್ರೀ ಆದಿಚುಂಚನಗಿರಿ ಮಠದ ಆಧೀನದಲ್ಲಿರುವ ಆದಿಶಕ್ತಿ ಮೆಳಿಯಮ್ಮ ಟ್ರಸ್ಟ್‌ಗೆ ಹಸ್ತಾಂತರಿಸಲಾಯಿತು.
ಗುರುವಾರ ಮದ್ಯಾಹ್ನ ಕುಂದೂರು ಮಠದ  ರಾಮಯ್ಯ ಪರದೇಶಿ ಸ್ವಾಮೀಜಿ ಅವರು ಮಠ ಸೇರಿದಂತೆ 240ಕ್ಕೂ ಹೆಚ್ಚು ಎಕರೆ ಭೂಮಿ ಹಾಗೂ ದೇವಾಲಯದ ಉಸ್ತುವಾರಿಯನ್ನು ಶ್ರೀ ಆದಿಚುಂಚನಗಿರಿ ಮಠದ ಅಧೀನದಲ್ಲಿ ರಚಿತವಾಗಿರುವ ಆದಿಶಕ್ತಿ ಮೆಳೆಯಮ್ಮ ಟ್ರಸ್ಟ್‌ಗೆ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಹಸ್ತಾಂತರಿಸಿದರು.
ಆದಿಚುಂಚನಗಿರಿ ಮಠಾದೀಶರಾದ ನಿರ್ಮಲಾನಂದನಾಥ ಸ್ವಾಮೀಜಿ, ಹಾಸನ ಶಾಖಾಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ ಈ ಸಂದರ್ಭದಲ್ಲಿ ಹಾಜರಿದ್ದು, ಕುಂದೂರು ಗ್ರಾಮದ ಜನತೆ ರಾಮಯ್ಯ ಪರದೇಶಿ ಸ್ವಾಮೀಜಿ ಅವರೊಂದಿಗೆ ಆಗಮಿಸಿ ಮಠದ ಉಸ್ತುವಾರಿಯನ್ನು ಆದಿಚುಂಚನಗಿರಿ ಮಠಕ್ಕೆ ವಹಿಸಿದರು.
ಹಸ್ತಾಂತರದ ನಂತರ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ಕುಂದೂರು ಮಠವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಟ್ರಸ್ಟ್ ಪ್ರಾರಂಭಿಸಿ ಅದರ ಹೆಸರಿನಲ್ಲಿ ಮಠವನ್ನು ಅಭಿವೃದ್ಧಿಪಡಿಸುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ಸುತ್ತಮುತ್ತಲ ಗ್ರಾಮಸ್ಥರು ಸೇರಿ ಮಠವನ್ನು ಅಭಿವೃದ್ಧಿ ಪಡಿಸುವಂತೆ ಹಿಂದಿನಿಂದಲೂ ಒತ್ತಾಯ ಮಾಡುತ್ತಿದ್ದರು. ಇಂದು ಅದಕ್ಕೆ ಕಾಲ ಕೂಡಿ ಬಂದಿದೆ ಎಂದು ತಿಳಿಸಿದರು.
ಮಠದ ಆವರಣದಲ್ಲಿರುವ ಕುಂದೂರು ಮೆಳಿಯಮ್ಮ ಹಾಗೂ ಶ್ರೀ ರಂಗನಾಥಸ್ವಾಮಿ ದೇವಾಲಯದ ಒಡೆತನವನ್ನು ಶ್ರೀ ಆದಿಚುಂಚನಗಿರಿ ಮಠ ವಹಿಸಿಕೊಂಡಿದ್ದು, ಎರಡೂ ದೇವಾಲಯಗಳನ್ನು ಜೀರ್ಣೋದ್ದಾರ ಕಾರ್ಯಕ್ಕೆ ಆದ್ಯತೆ ನೀಡುವ ನಂಬಿಕೆಯಿಟ್ಟುವ ಸುತ್ತಮುತ್ತಲಿನ ಜನತೆ ಇದೊಂದು ಪ್ರಸಿದ್ದ ದೇವಾಲಯಗಳಾಗಿ ಮಾಡುತ್ತಾರೆಂಬ ಆಶಯವನ್ನು ಸುತ್ತಮುತ್ತಲಿನ ಜನತೆ ನಿರೀಕ್ಷಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement