ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಪದ್ಮನಾಭ್
ಕ.ಪ್ರ.ವಾರ್ತೆ ಹಾಸನ ಡಿ.5
ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷರಾಗಿ ಎಂ.ಕೆ. ಪದ್ಮನಾಬ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಸಭೆಯಲ್ಲಿ ನಗರಾಧ್ಯಕ್ಷ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಚನ್ನಕೇಶವ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರ ಸಭೆಯಲ್ಲಿ ಎಮ್.ಕೆ. ಪದ್ಮನಾಬ್ ಅವರನ್ನು ಆಯ್ಕೆ ಮಾಡಲಾಯಿತು. ಈ ವೇಳೆ ಹೂವಿನ ಮಾಲೆಯನ್ನು ಹಾಕಿ ಪಕ್ಷದ ಬಾವುಟ ನೀಡಿ ಗೌರವಿಸಿದರು. ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್, ಐನೇಟಟ್ವಿಜಿಕುಮಾರ್, ನಗರ ಉಪಾಧ್ಯಕ್ಷ ಹೆಚ್.ಆರ್. ಯೋಗೇಶ್ ಕುಮಾರ್, ಮಧು, ಖಜಾಂಚಿ ಕಿರಣ್, ಸದಸ್ಯರಾದ ಲೋಕೇಶ್, ನಂದೀಶ್ ಇತರರು ಭಾಗವಹಿಸಿದ್ದರು.