ಮೂವರು ಬೈಕ್ ಕಳ್ಳರ ಬಂಧನ
ಹಾಸನ: ಮೂವರು ಬೈಕ್ಗಳನ್ನು ಬಂಧಿಸಿದ್ದು, ರು. 70 ಸಾವಿರ ಬೆಲೆಯ ಎರಡು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಅರಸೀಕೆರೆ ತಾಲ್ಲೂಕಿನ ಜಾವಗಲ್ ಹಾರನಹಳ್ಳಿ ಸರ್ಕಲ್ನಲ್ಲಿ ಬಂದೂರು ಕಡೆಯಿಂದ ಚಂದ್ರಯ್ಯ (35) ಮತ್ತು ರಘು (21) ಎಂಬವರು ಪಲ್ಸರ್ ಮೋಟರ್ ಸೈಕಲ್ನಲ್ಲಿ ಬಂದಾಗ ಪೊಲೀಸರು ಹಿಡಿದು ಬೈಕಿನ ದಾಖಲಾತಿಗಳನ್ನು ಕೇಳಲಾಗಿ ಬೈಕ್ ನ ದಾಖಲಾತಿಗಳಿಲ್ಲ ಎಂದು ತಿಳಿಸಿದ್ದು, ಬೈಕ್ನ್ನು ಕಳ್ಳವು ಮಾಡಿರುವುದು ಪತ್ತೆಯಾಗಿದೆ. ಅವರನ್ನು ಬಂಧಿಲಾಗಿದ್ದು, ಅವರ ಬಳಿ ಇದ್ದ ರು. 50,000 ರು. ಬೆಲೆಯ ಪಲ್ಸರ್ ಮೋಟಾರ್ ಬೈಕ್ ವಶಪಡಿಸಿಕೊಂಡಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಅರಸೀಕೆರೆ ಪಟ್ಟಣ ಹುಳಿಯಾರ್ ಸರ್ಕಲ್ನಲ್ಲಿ ಆರೋಪಿ ಮನು (25) ಟಿವಿಎಸ್ ವಿಕ್ಟರ್ ಬೈಕ್ನಲ್ಲಿ ಹೋಗುತ್ತಿದ್ದವನನ್ನು ಹಿಡಿದು ಬೈಕಿನ ದಾಖಲಾತಿಗಳನ್ನು ಕೇಳಲಾಗಿ ಸಮಂಜಸ ಉತ್ತರ ಕೊಡದೇ ಬೈಕ್ನ್ನು ಎಲ್ಲಿಂದಲೋ ಕಳ್ಳವು ಮಾಡುವುದು ಪತ್ತೆಯಾಗಿದೆ. ಕೂಡಲೇ ಆತನನ್ನ ಬಂಧಿಸಿದ್ದು, 20 ಸಾವಿರ ಬೆಲೆಯ ಟಿವಿಎಸ್ ವಿಕ್ಟರ್ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ.