'ವಿಕಲಚೇತನರಿಗೆ ಆತ್ಮಸ್ಥೈರ್ಯ ತುಂಬಿರಿ'
ಬೇಲೂರು: ಸಮಾಜದಲ್ಲಿ ವಿಕಲಚೇತನರಿಗೆ ಅತ್ಮಸ್ಥೈರ್ಯ ತುಂಬಿ ಮುಖ್ಯವಾಹಿನಿಗೆ ಕೊಂಡ್ಯೊಯುವ ಕರ್ತವ್ಯ ಎಲ್ಲರದ್ದಾಗಿದೆ ಎಂದು ಕ್ಷೇತ್ರಶಿಕ್ಷಾಣಾಧಿಕಾರಿ ಬಿ.ಕೆ. ಸುಂದರೇಶ್ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕವಾಗಿ ಅನುವಂಶೀಯವಾಗಿ ವಿಕಲಚೇತರಾಗಿರಬಹುದು. ಆದರೆ ಸಮಾಜದಲ್ಲಿ ಅಂತವರಿಗೆ ಉತ್ತಮ ಸೌಲಭ್ಯ ನೀಡುವ ಮೂಲಕ ಅವರನ್ನು ನಮ್ಮಂತೆ ಕಾಣಬೇಕು ಎಂದು ಹೇಳಿದರಲ್ಲದೆ ಪ್ರಸ್ತುತ ವಿಕಲಚೇತನರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದು ಕ್ರೀಡಾ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಾಗು ಇನ್ನಿತರೆ ಕ್ಷೇತ್ರಗಳಲ್ಲಿ ಸಾಧನೆ ಗೈದಿರುವುದು ಶ್ಲಾಘನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅನಂದ್,ಕಾರ್ಯದರ್ಶಿ ಮಹೇಶ್, ಚಂದ್ರಶೇಖರಯ್ಯ,ಪದವಿ ಪೂರ್ವ ಕಾಲೇಜ್ ಪ್ರಾಂಶುಪಲೆ ಮಂಜುಳ, ಮುಖ್ಯೋಪಾಧ್ಯಾಯ ಪಾಲಾಕ್ಷ, ಅಂಗವಿಕಲರ ಸಂಘದ ತಾಲೂಕು ಅಧ್ಯಕ್ಷ ಪುರುಷೋತ್ತಮ್, ಆಳ್ವಾಸ್ ಸಿರಿನುಡಿ ಅಧ್ಯಕ್ಷ ಸುದರ್ಶನ್, ಇತರರು ಇದ್ದರು. ಈ ಸಂದರ್ಭದಲ್ಲಿ ಅಂಗವಿಕಲರಾದ ನಿಂಗೇಗೌಡ, ಕುಮಾರಸ್ವಾಮಿ, ವೀರಣ್ಣ, ಮಂಜು, ಸುಧಾಮಣಿ ಅವರನ್ನು ಸನ್ಮಾನಿಸಲಾಯಿತು.