ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಜೃಂಭಣೆಯ ಕಾರ್ತೀಕ ದೀಪೋತ್ಸವ

Mainashree
Updated On : 5 Dec 2013, 9:52 am

ಜಾವಗಲ್: ಜಾವಗಲ್‌ನ ನಾನಾ ದೇವಾಲಯಗಳಲ್ಲಿ ಕಡೆ ಕಾರ್ತೀಕ ದೀಪೋತ್ಸವವನ್ನು ಸಡಗರ, ಸಂಭ್ರಮದಿಂದ ಇತ್ತೀಚೆಗೆ ಆಚರಿಸಲಾಯಿತು.
ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ವಿಶೇಷ ಪೂಜೆ ನಡೆಸಿ ಹಣತೆಯ ದೀಪಗಳನ್ನು ಹಚ್ಚಲಾಯಿತು.
ಮಹಾಲಕ್ಷ್ಮೀ ಅಮ್ಮನವರಿಗೆ ವಿಶೇಷ ಪೂಜೆ, ಅರ್ಚನೆ ನೆರವೇರಿಸಲಾಯಿತು. ದೇವಾಂಗ ಸಮಾಜದ ವತಿಯಿಂದ ಶ್ರೀ ಬನಶಂಕರಿ ಮತ್ತು ಶ್ರೀ ರಾಮಚಂದ್ರ ದೇವರ ಉತ್ಸವ ಮೂರ್ತಿಗಳನ್ನು ಪುಷ್ಪ ಮತ್ತು ವಿದ್ಯುತತ್ದೀಪಾಲಂಕಾರದಿಂದ ನಿರ್ಮಿಸಿದ್ದ ವಾಹನದಲ್ಲಿ ಕುಳ್ಳಿರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಶ್ರೀ ಗಂಗಾಮತಸ್ಥ ಸಮಾಜ ಭಾಂದವರು ಗಂಗಾ ಪರಮೇಶ್ವರಿ ದೇವಾಲಯದಲ್ಲಿ ಅಮ್ಮನವರಿಗೆ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಮಾಡಲಾಯಿತು. ಶ್ರೀ ಎಲ್ಲಮ್ಮ ದೇವಿ ದೇವಾಲಯ  ಸೇರಿದಂತೆ ನಾನಾ ದೇವಾಲಯದಲ್ಲಿ ದೀಪೋತ್ಸವವನ್ನು ನಡೆಸಲಾಯಿತು.
ಮಂಗಳವಾರ ಬೆಳಗ್ಗೆ ಗ್ರಾಮದೇವತೆ ಕರಿಯಮ್ಮ, ಪ್ಲೇಗಿನಮ್ಮ, ದೊಡ್‌ಡಮ್ಮ ದೇವಿಯವರನ್ನು ಪುಷ್ಪಾಲಂಕೃತ ವಾಹನದಲ್ಲಿ ಶೃಂಗರಿಸಿ ಸೋಮನ ಕುಣಿತ, ದೋಣುಬಡಿತ, ಕರಡೆ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement