ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸದಾನಂದಗೌಡರು ಇಲ್ಲಿ ಇನ್ನೂ ಸಿಎಂ!

Mainashree
Updated On : 5 Dec 2013, 9:55 am

ಕ.ಪ್ರ.ವಾರ್ತೆ   ಹೊಳೆನರಸೀಪುರ   ಡಿ. 5
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಆರೇಳು ತಿಂಗಳು ಕಳೆದರೂ ಸಹ ತಾಲೂಕಿನ  ಕೆಲ ಕಚೇರಿಗಳಲ್ಲಿ ಈಗಲೂ ಸದಾನಂದಗೌಡ ಅವರೇ ಮುಖ್ಯಮಂತ್ರಿ! ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಾಕಿರುವ ಬ್ಯಾನರ್ ಇದನ್ನು ಸಾರಿ ಹೇಳುತ್ತಿದೆ.
ಏನಿದು ಬ್ಯಾನರ್?: ರಾಜ್ಯ ಸರ್ಕಾರ ಸಕಾಲದಡಿಯಲ್ಲಿ ಅರ್ಜಿಗಳನ್ನು ನೀಡಬಹುದಾಗಿದೆ ಎಂಬ ಮಾಹಿತಿಯುಳ್ಳ ಬ್ಯಾನರ್ ಅನ್ನು ಸಾರ್ವಜನಿಕರ ಮಾಹಿತಿಗಾಗಿ ಹಾಕಲಾಗಿದೆ.
ಸದಾನಂದ ಗೌಡ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಅವರ ನಂತರ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳು ಕಳೆದಿದ್ದರು. ಆನಂತರವಷ್ಟೇ ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರ ಗದ್ದುಗೆಗೇರಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಇದಿಷ್ಟೂ ಘಟನಾವಳಿಗಳೂ ಇಡೀ ರಾಜ್ಯಕ್ಕೇ ಗೊತ್ತು. ಆದರೆ, ಈ ಬ್ಯಾನರ್ ಸಿದ್ಧಪಡಿಸಿದವರಿಗಷ್ಟೇ ಇದು ತಿಳಿದಿಲ್ಲ. ಅದಕ್ಕೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಆರು ತಿಂಗಳುಗಳೇ ಕಳೆದರೂ, ಬ್ಯಾನರ್ ಸಿದ್ಧಪಡಿಸಿದವರ ಪಾಲಿಗೆ ಸದಾನಂದಗೌಡರೇ ಮುಖ್ಯಮಂತ್ರಿ!
ಆದರೆ, ಇದಕ್ಕಿಂತಲೂ ವಿಪರ್ಯಾಸದ ಸಂಗತಿ ಏನೆಂದರೆ, ಬ್ಯಾನರ್‌ನಲ್ಲಿ ಈ ಪ್ರಮಾದ ಕಣ್ಣಿಗೆ ರಾಚುತ್ತಿದ್ದರೂ ಈ ತಪ್ಪನ್ನು ಸರಿಪಡಿಸುವ ಅಥವಾ ಬ್ಯಾನರ್ ಅನ್ನು ತೆಗೆಸಿಹಾಕುವ ಗೋಜಿಗೆ ಯಾರೂ ಹೋಗಿಲ್ಲ. ಈಗಲಾದರೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿನ ಬ್ಯಾನರ್ ತೆರವುಗೊಳಿಸುವರರೇ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement