ಸುದ್ದಿ ಸಂಕ್ಷೇಪ
ಸರ್ಕಾರಿ ರಸ್ತೆಯಲ್ಲಿ ಮನೆ ನಿರ್ಮಾಣಕ್ಕೆ ಸಮ್ಮತಿ: ದೂರು
ಹಾಸನ: ಚನ್ನರಾಯಪಟ್ಟಣ ಪುರಸಭೆ ವ್ಯಾಪ್ತಿಗೆ ಒಳಪಡುವ ಅಗ್ರಹಾರ ರಸ್ತೆಯಿಂದ ದೊಡ್‌ಡಮ್ಮದೇವಿ ದೇವಸ್ಥಾನದ ಮಧ್ಯಭಾಗಕ್ಕೆ ಸೇರಿಕೊಂಡಂತೆ ಕೊಳದ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಸೇರಿದಂತೆ ಈ ಜಾಗಗಳು ಸರ್ಕಾರಿ ನಕ್ಷೆಯಲ್ಲಿ 40 ಅಡಿಯ ರಸ್ತೆ ಇದೆ, ಆದರೆ ಪುರಸಭೆಯವರು ಈ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಆದ್ದರಿಂದ ಈ ಸ್ಥಳದಲ್ಲಿ ಸಂಚರಿಸಲು ವಾಹನಗಳು ಹಾಗೂ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸ್ಥಳೀಯ ಅಮಾಸೇಗೌಡ ತಿಳಿಸಿದ್ದಾರೆ. ಪುರಸಭೆಯಿಂದ ಇಂತಹ ಕೊಳಚೆ ಪ್ರದೇಶವನ್ನು ಅಭಿವಣದ್ಧಿ ಪಡಿಸುವ ಸಲುವಾಗಿ 1982ರಲ್ಲಿ ಶ್ರೀ ವಳಗೇರಮ್ಮ ದೇವಾಲಯದ 12ಎಕರೆ 32 ಕುಂಟೆ ಜಾಗವನ್ನು ಅಕ್ರಮಿಸಿಕೊಳ್ಳಲಾಯಿತು. ಆದರೆ ಈ ಜಾಗದಲ್ಲಿ ಕೊಳಚೆ ನಿರ್ಮೂಲನಾ ನಿವಾಸಿಗಳಿಗೆ ಸ್ಥಳ ಸಿಗಲಿಲ್ಲ ಈ ಸ್ಥಳ ಶ್ರೀಮಂತರು ಹಾಗೂ ಉಳ್ಳವರ ಪಾಲಾಯಿತು ಎಂದು ಹೇಳಿದ್ದಾರೆ. ಮತ್ತೆ 2000ನೇ ವರ್ಷದ ಸಾಲಿನಲ್ಲಿ ನಿರಾಶಿತರಿಗೆಂದು ಆಶ್ರಯ ಕಲ್ಪಿಸುವ ಸಲುವಾಗಿ ಮಾರೇನಹಳ್ಳಿ, ನಾಗಸಮುದ್ರ ಜಾಗವನ್ನು ಮೀಸಲಿಡಲಾಯಿತು. ಆದರೂ ಈ ಜಾಗ ಮತ್ತೆ ವಸತಿ ಇಲ್ಲದವರಿಗೆ ಸಿಗಲಿಲ್ಲ ಮತ್ತೆ ಶ್ರೀಮಂತರ ಮತ್ತು ಉಳ್ಳವರ ಪಾಲಾಯಿತು ಎಂದು ತಿಳಿಸಿದ್ದಾರೆ. ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರುಗಳು ಕಣ್ಣುಮುಚ್ಚಿಕುಳಿತು ಇಂತಹ ಕೊಳಚೆ ನಿವಾಸಿಗಳ ಕಮನ ಸೆಳೆಯುತ್ತಿಲ್ಲ ಇವರಿಗೆ ನೀಡಿರುವ ಜಾಗ 10್ಗ20 ಆಗಿರುತ್ತದೆ. ಆದರೆ ಈ ನಿವಾಸಿಗಳು 30್ಗ40ಕ್ಕೆ ಗೃಹ ನಿರ್ಮಾಣ ಮಾಡಿಕೊಂಡು ಸಾರ್ವಜನಿಕರಿಗೆ ನಡೆದಾಡಲು ಹಾಗೂ ವಾಹನ ಸವಾರರಿಗೆ ಬಹಳ ತೊಂದರೆ ಉಂಟಾಗುತ್ತಿದೆ. ಈ ಭಾಗದಿಂದ ಹೊಲ ಗದ್ದೆಗಳಿಗೆ ಕೆರೆಗೆ ತೆರಳುವ ಸ್ಥಳವಾಗಿದ್ದು ಖುದ್ದಾಗಿ ಈ ನಿವಾಸಿಗಳನ್ನು ಸ್ಥಳಾಂತರ ಮಾಡಿ ರಸ್ತೆಯಲ್ಲಿ ಸಂಚಾರಿಸಲು ಶಾಸಕರು ಹಾಗೂ ಪುರಸಭೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರ ಮನವಿ ಎಂದಿದ್ದಾರೆ. ನಾವು ಬಡ ಕುಟುಂಬದಿಂದ ಬಂದಿದ್ದು ಈ ಸ್ಥಳದಲ್ಲಿ 20ರಿಂದ 25 ವರ್ಷ ವಾಸಿಸುತ್ತಿದ್ದು ನಮಗೆ ಸರ್ಕಾರದಿಂದ ಹಾಗೂ ಪುರಸಭೆಯಿಂದ ಯಾವುದೇ ನಿವೇಶನ ಹಾಗೂ ಮನೆ ಇರುವುದಿಲ್ಲ. ಆದ ಕಾರಣ ಈ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿದ್ದೇವೆ, ನಮಗೆ ಸರಿಯಾದ ಸ್ಥಳವನ್ನು ನೀಡಲಿ ನಂತರ ನಾವು ಸ್ಥಳಾಂತರ ಮಾಡುತ್ತೇವೆ ಎಂದು ಹೇಳಿದ್ದಾರೆ.
ಆರೋಗ್ಯ ಶಿಬಿರ
ಮೈಸೂರು: ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಿಂದ ಡಿ.9ರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ವಾಜಪೇಯಿ ಆರೋಗ್ಯಶ್ರೀ ಆರೋಗ್ಯ ತಪಾಸಣೆ ಶಿಬಿರವನ್ನು ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದು, ಮೊ. 96203 25258 ಸಂಪರ್ಕಿಸಬಹುದು. ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ಅವಕಾಶ.