ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಂಬೇಡ್ಕರ್ ಆಶಯ ಮಣ್ಣುಪಾಲಾಗುತ್ತಿದೆ'

Rashmi Kasaragodu
Updated On : 7 Dec 2013, 12:08 pm

ಸಕಲೇಶಪುರ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಅಂಬೇಡ್ಕರ್ ಅವರ  57ನೇ  ಪರಿನಿರ್ವಾಣ ದಿನ ಆಚರಿಸಲಾಯಿತು.
ಅಂಬೇಡ್ಕರ್ ಭವನ ಅಬಿವೃದ್ಧಿ ಸಮಿತಿಯ ಅಧ್ಯಕ್ಷ ಬಿ. ಸಿದ್ದಯ್ಯ ಮಾತನಾಡಿ, ಇಂದು ವಿದ್ಯಾವಂತ ದಲಿತರು ಅಂಬೇಡ್ಕರ್ ಕಲ್ಪಿಸಿರುವ ಸಂವಿಧಾನದ ಲಾಭಪಡೆದು ಅಧಿಕಾರಿಗಳಾಗಿ, ರಾಜಕಾರಣಿಗಳಾಗಿ ಪ್ರಗತಿ ಹೊಂದಿದ್ದರು, ದಲಿತರನ್ನು ಕಡೆಗಣಿಸುವ ಮೂಲಕ ಅಂಬೇಡ್ಕರ್ ಆಶಯವನ್ನು ಮಣ್ಣುಪಾಲು ಮಾಡುತ್ತಿದ್ದಾರೆಂದೇ ವಿಷಾದಿಸಿದರು. ವಕೀಲೆ ಶಾರದ ಕಾಳಿಂಗಪ್ಪ ಮಾತನಾಡಿ, ಸರ್ಕಾರ ಅಸ್ಪಸ್ಯರಿಗಾಗಿ ಕಲ್ಪಿಸಿರುವ ಯೋಜನೆಗಳ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಕಾಯ್ದೆ ದಲಿತರ ಉದ್ದಾರಕ್ಕೆ ಸಹಕಾರಿಯಾಗಿದ್ದು ಈ ಕಾಯ್ದೆ ಜಾರಿಗೆ ಬಂದ ನಂತರ ದಲಿತರು ಹೆಚ್ಚು ಜಾಗೃತರಾಗಿರ ಬೇಕು ಎಂದರು.
ಜಿ.ಪಂ ಸದಸ್ಯ ಪರ್ವತಯ್ಯ, ತಾ.ಪಂ ಸದಸ್ಯ ಕೂಮರಯ್ಯ, ಎಪಿಎಂಸಿ ಸದಸ್ಯ ನಲ್ಲುಲ್ಲಿ ಈರಪ್ಪ ಪುರಸಭೆ ಸದಸ್ಯ ಕಾಳಿಂಗಪ್ಪ, ಬಾಳ್ಳುಪೇಟೆ ಗ್ರಾಪಂ ಮಾಜಿ ಅಧ್ಯಕ್ಷ ಈರಪ್ಪ ಮುಖಂಡರಾದ ಮರಡಿಕೆರೆ ನಾಗೇಶ್, ಮಳಲಿ ಶಿವಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement