'ಅಂಬೇಡ್ಕರ್ ಮಾರ್ಗದರ್ಶನ ಇಂದಿಗೂ ಪ್ರಸ್ತುತ'
ಕ.ಪ್ರ.ವಾರ್ತೆ ಅರಸೀಕೆರೆ ಡಿ. 6
ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಡಾ.ಬಿ.ಆರ್. ಅಂಬೇಡ್ಕರ್ ಹಾಕಿಕೊಟ್ಟಿರುವ ಮಾರ್ಗದರ್ಶನಗಳು ಇಂದಿಗೂ ಪ್ರಸ್ತುತವಾಗಿದ್ದು. ಆ ನಿಟ್ಟಿನಲ್ಲಿ ನಾವುಗಳು ಕಾರ್ಯ ಪ್ರವೃತ್ತರಾದರೇ ಮಾತ್ರ ಸಮಾಜದಲ್ಲಿ ಉತ್ತಮ ಬೆಳವಣಿಗೆಗಳನ್ನು ಕಾಣಲು ಸಾಧ್ಯ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ರಂಗನಾಥ್ ತಿಳಿಸಿದರು.
ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಶುಕ್ರವಾರ ನಾನಾ ಸಂಘಟನೆಗಳೊಂದಿಗೆ ಆಯೋಜಿಸಲಾಗಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ 57 ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲೂ ಅಂಬೇಡ್ಕರ್ ಅವರು ನೊಂದ ದೀನ ದಲಿತರಿಗೆ ದಾರಿ ದೀಪವಾಗುವಂತಹ ಮಾರ್ಗದರ್ಶನಗಳನ್ನು ಅವರು ಹಾಕಿಕೊಟ್ಟಿದ್ದಾರೆ ಎಂದರು. ಆಸ್ಪತ್ರೆಯಲ್ಲಿದ್ದ ರೋಗಿಗಳಿಗೆ ಹಣ್ಣು, ಹಂಪಲು ಮತ್ತು ಬ್ರೆಡ್‌ಗಳನ್ನು ಮಹಾ ಪರಿನಿರ್ವಾಣ ಪ್ರಯುಕ್ತ ಹಂಚಲಾಯಿತು. ಈ ಸಂದರ್ಭದಲ್ಲಿ ಡಾ.ಪಾಂಡುರಂಗ ಹೆಬ್ಬಾರ್, ರೋಟರಿ ಅಧ್ಯಕ್ಷ ಪ್ರವೀಣ್ ಕುಮಾರ್, ಪುರಸಭಾ ಸದಸ್ಯ ಬಾಲಮುರುಗನ್, ಮುಖಂಡರಾದ ಜಾವಗಲ್ ಇಂದ್ರೇಶ್, ಆನಂದ್, ಹರಳಕಟ್ಟ ಕುಮಾರ್ ಸ್ವಾಮಿ, ಮಾಡಾಳು ಚಂದ್ರಪ್ಪ, ನಟರಾಜು, ಜಿ.ಎಂ.ಹಟಗಯ್ಯ, ಈರಯ್ಯ, ವಿ.ಪಿ.ಗಣೇಶ್, ರುದ್ರಪ್ಪ, ಜಾಜೂರು ಬಸವರಾಜು, ರಾಜ್ಯ ನೌಕರರ ವರ್ಗದ ಎಂ. ಹನುಮಂತಪ್ಪ, ಶಿವಕುಮಾರ್, ದೊಡ್ಡವೀರಪ್ಪ, ರುದ್ರಪ್ಪ ಇದ್ದರು.