ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಗ್ರಾಮೀಣ ಜನಪದ ಉತ್ಸವ

Rashmi Kasaragodu
Updated On : 7 Dec 2013, 12:08 pm

ಹಾಸನ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ,  ಹೊಯ್ಸಳ ಜಾನಪದ ಕಲಾ ಸಂಸ್ಥೆ, ಸಿಎಂಎಸ್‌ಎಸ್‌ಎಸ್ ಸೇವಾಸಂಸ್ಥೆ, ಚೌರಿಕೊಪ್ಪಲಿನ ಸ್ತ್ರೀಶಕ್ತಿ ಸಂಘ ಮತ್ತು ಸ್ವಸಹಾಯ ಸಂಘ, ಪುರುಷರ ಸಂಘದ ಸಂಯುಕ್ತಾಶ್ರಯದಲ್ಲಿ ಡಿ.7 ರಂದು ಮಧ್ಯಾಹ್ನ 1.30 ಕ್ಕೆ ಚೌರಿಕೊಪ್ಪಲು ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಗ್ರಾಮೀಣ ಜನಪದ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  
ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಭರತ್ ಕಲ್ಮೀನಾ ಕಾರ್ಯಕ್ರಮ ಉದ್ಘಾಟಿಸುವರು. ಫಾದರ್ ಫೆಲಿಕ್ಸ್ ಥಾಮಸ್ ರೊಜಾರಿಯೋ ಅಧ್ಯಕ್ಷತೆ ವಹಿಸುವರು.
ಆರ್.ಪಿ. ವೆಂಕಟೇಶ ಮೂರ್ತಿ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಮೂರ್ತಪ್ಪ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ್, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿದೇಶಕ ವಿನೋದ್ ಚಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಾನಂದ, ಗಾಡೇನಹಳ್ಳಿಯ ಫಾದರ್ ಬಾಲರಾಜ್, ಗ್ರಾಮದ ವೆಂಕಟೇಶ್, ಶಾಂತಪ್ಪ, ಪ್ರಗತಿ ಸಂಸ್ಥೆಯ ಅಧ್ಯಕ್ಷ ಗ್ಯಾರಂಟಿ ರಾಮಣ್ಣ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಚ್.ಎಂ. ದಿನೇಶ್, ಮತ್ತು  ಶ್ರೀಕಾಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ವಾರ್ತಾ ಇಲಾಖೆ ವತಿಯಿಂದ ಬೀದಿ ನಾಟಕ ಪ್ರದರ್ಶನ ಮತ್ತು ಕೋಲಾಟ, ಜಾನಪದ ನೈತ್ಯ, ಕಂಸಾಳೆ ನೃತ್ಯ, ವೀರಗಾಸೆ, ಸುಗಗಿ ಕುಣಿತ, ಜಾನಪದ ಗೀತೆ, ಸೋಬಾನೆ ಪದ, ಬೀಸುವ ಕಲ್ಲಿನ ಪದ, ತತ್ವ ಪದ, ಕರಪಾಲನ ಮೇಳ, ಹಾಗೂ ನಾನಾ ಕಲಾ ಪ್ರದರ್ಶನಗಳು ನಡೆಯುತ್ತವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement