ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಹಾರ ಧನ ವಿತರಣೆ

Rashmi Kasaragodu
Updated On : 8 Dec 2013, 12:15 pm

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಕಾಲುಬಾಯಿ ಜ್ವರದಿಂದ ಮರಣ ಹೊಂದಿದ 37 ರಾಸುಗಳ ಮಾಲಿಕರಿಗೆ ಪರಿಹಾರ ಧನವನ್ನು ಶಾಸಕ ಸಿ.ಎನ್.ಬಾಲಕೃಷ್ಣ ವಿತರಿಸಿದರು.  ಸರ್ಕಾರದ ವತಿಯಿಂದ ಮಂಜೂರಾದ 7.75 ಲಕ್ಷವನ್ನು ತಾಲೂಕಿನ 37 ರೈತರಿಗೆ ಚೆಕ್ ಮುಖಾಂತರ ವಿತರಿಸಿದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ 81 ರಾಸುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿದ್ದು, ಉಳಿದ ರಾಸುಗಳಿಗೆ ಪರಿಹಾರವನ್ನು ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದು ತಿಳಿಸಿದರು.  ತಾಲೂಕಿನಲ್ಲಿ ಕಾಲುಬಾಯಿ ಜ್ವರ ಹತೋಟಿಯಾಗಿರುವ ಬಗ್ಗೆ ಪಶು ವೈದ್ಯಾಧಿಕಾರಿಗಳು ವರದಿ ನೀಡಿದ್ದು, ಮುಂದಿನ 15 ದಿನಗಳಿಗೆ ಮಾತ್ರ ಈ ಯೋಜನೆ ಜಾರಿಯಲ್ಲಿರುತ್ತದೆ. ರೈತರು ತಮ್ಮ ಜಾನುವಾಗೆ ಪೂರ್ವಯೋಜಿತವಾಗಿ ಔಷಧೋಪಚಾರ ಮಾಡಿಸಬೇಕೆಂದು ತಿಳಿಸಿದರು.  ಸರ್ಕಾರದಿಂದ ಸಿಗುವ ಯೋಜನೆಯನ್ನು ಕಾಯುವುದಕ್ಕಿಂತ ರೈತರು ತಮ್ಮ ರಾಸುಗಳಿಗೆ ವಿಮೆ ಪಾಲಿಸಿ ಮಾಡಿಸುವುದು ಉತ್ತಮ ಎಂದರು. ತಾಲೂಕು ಪಶು ವೈದ್ಯಾಧಿಕಾರಿ ನಾಗರಾಜು, ತಹಸೀಲ್ದಾರ್ ಡಾ. ನಾಗರಾಜು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement