ಕೆನರಾ ಕೃಷಿ ಇ-ಮೇಳ
ಹಾಸನ: ಕೃಷಿ, ಶಿಕ್ಷಣ ಮತ್ತು ಉದ್ದಿಮೆಗಳ ಏಳಿಗೆಗೆ ಕೆನರಾ ಬ್ಯಾಂಕ್ ವಿಶೇಷ ಕಾಳಜಿ ಹೊಂದಿದ್ದು, ಅದಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ ಸಾಲ ಒದಗಿಸುವ ಎಲ್ಲಾ ವರ್ಗಗಳ ಪ್ರಗತಿಗೆ ಕೈಜೋಡಿಸುತ್ತಿದೆ ಎಂದು ಕೆನರಾ ಬ್ಯಾಂಕ್ ಪ್ರಬಂಧಕ ಎನ್.ಎಸ್. ಭಟ್ ತಿಳಿಸಿದರು.ನಗರದ ತಣ್ಣೀರು ಹಳ್ಳದಲ್ಲಿ ಕೆನರಾಬ್ಯಾಂಕ್ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಕೃಷಿ-ರಿಟೇಲ್-ಎಂಎಸ್ಇ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಬಡವರು, ವ್ಯಾಪಾರಿಗಳು, ಕೃಷಿಕರು, ಸಣ್ಣ ಪುಟ್ಟ ಉದ್ಯಮಗಳು ಆರ್ಥಿಕವಾಗಿ ಸಬಲವಾಗಬೇಕು ಅದಕ್ಕಾಗಿ ಪ್ರತಿಯೊಂದು ಸೂಕ್ಷ್ಮ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಾಲ ಯೋಜನೆ ರೂಪಿಸಲಾಗಿದೆ ಎಂದು ಭಟ್ ಹೇಳಿದರು. ಜಿಪಂ ಸಿಇಒ ಉಪೇಂದ್ರ ಪ್ರತಾಪ್ ಸಿಂಗ್, ಕೆನರಾ ಬ್ಯಾಂಕ್ ಉಪ ಮಹಾ ಪ್ರಬಂಧಕ ಡಾ.ಎಸ್.ಡಿ.ರಾಮಚಂದ್ರ ಇದ್ದರು.