ಬೆಂಕಿ ಆಕಸ್ಮಿಕ: ಗುಡಿಸಲು ಭಸ್ಮ
ಬೇಲೂರು: ಮಾದಿಹಳ್ಳಿ ಹೋಬಳಿ ನಂಜಾಪುರ ಗ್ರಾಮದಲ್ಲಿ ಗುಡಿಸಲೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ನಂತರ ಏಕಾಏಕಿ ಎಲ್ಲಾ ಕಡೆ ಆವರಿಸಿಕೊಂಡು 3 ಗುಡಿಸಲು ಹಾಗೂ 4 ಹಂಚಿನ ಮನೆ ಸಂಪೂರ್ಣ ಆಹುತಿ ತೆಗೆದುಕೊಂಡಿದೆ. ಇದರಿಂದ ರು. 4 ಲಕ್ಷ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಗುಡಿಸಲು ಭಸ್ಮವಾಗಿರುವ ನಿರಾಶ್ರಿತರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ. ಅಗ್ನಿ ಶಾಮಕ ದಳದವರು ಸಕಾಲಕ್ಕೆ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಶಾಸಕ ಭೇಟಿ: ಸ್ಥಳಕ್ಕೆ ಶಾಸಕ ವೈ.ಎನ್. ರುದ್ರೇಶಗೌಡ ಭೇಟಿ ನೀಡಿ, 30 ಆಶ್ರಯ ಮನೆಯನ್ನು ಸರ್ಕಾರದಿಂದ ಕೊಡಿಸುವುದಾಗಿ ಭರವಸೆ ನೀಡಿದರು.