ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಉಡುಪಿಯಲ್ಲಿ ಮಡೆಸ್ನಾನ ಬದಲು ಎಡೆಸ್ನಾನ: ಪೇಜಾವರ ಶ್ರೀ

Vishwanath S
Updated On : 10 Dec 2013, 12:26 pm

ಹಾಸನ: ಉಡುಪಿ ಸುಬ್ರಹ್ಮಣ್ಯ ಮಠದಲ್ಲಿ ಮಡೆಸ್ನಾನದ ಬದಲಾಗಿ ಎಡೆಸ್ನಾನ ಪ್ರಾರಂಭಿಸಿರುವುದಾಗಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಜಿ ತಿಳಿಸಿದರು. ನಗರದಲ್ಲಿ ಭೀಮಾ ಜುವಲೆರ್ಸ್ ನೂತನ ಮಳಿಗೆ  ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಡೆಸ್ನಾನ ಅಂದ್ರೆ ದೇವರಿಗೆ ಎಡೆ ಇಟ್ಟ ಪ್ರಸಾದದ ಮೇಲೆ ಉರುಳುವುದು. ದೋಷ ಪರಿಹಾರ ಆಗಬೇಕೆಂಬ ಭಕ್ತರ ಭಾವನೆ. ನಂಬಿಕೆಗೆ ಗೌರವಕೊಟ್ಟು ಈ ಪದ್ಧತಿ ಚಾಲು ಗೊಳಿಸಲಾಗಿದೆ. ದೇವರ ಎಡೆ ಮೇಲೆ ಉರುಳೋದು ಅಸಹ್ಯ ಅಥವಾ ಅಪಮಾನ ಅಲ್ಲ. ಹೀಗೆ ಹೊಸ ಆಚರಣೆಯಲ್ಲಿ ಆಕ್ಷೇಪಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದು ನಂಬಿಕೆಯೇ ಹೊರತು, ಅನ್ಯಾಯ ಅಥವಾ ಹಿಂಸೆ ಕೊಡುವ ಮೂಢನಂಬಿಕೆ ಅಲ್ಲ. ನಂಬಿಕೆಯನ್ನು ಕಿತ್ತು ಹೊಗೆಯಲು ಆಗಲ್ಲ ಎನ್ನುವ ಮೂಲಕ, ಎಡೆಸ್ನಾನ ಆಚರಣೆ ಸಮರ್ಥಿಸಿಕೊಂಡರು. ಸರ್ಕಾರ ಇದನ್ನು ಒಪ್ಪಿಕೊಂಡು ಕಾರ್ಯಗತಗೊಳಿಸಬೇಕು ಎಂದರು.
ಮಡೆಸ್ನಾನಕ್ಕೆ ಪರ್ಯಾಯವಾಗಿ ಎಡೆಸ್ನಾನ ಪದ್ಧತಿ ಆರಂಭಿಸಲಾಗಿದೆ. ಎಂಜಲು ಎಲೆ ಬದಲಾಗಿದೆ ದೇವರ ಪ್ರಸಾದದ ಎಲೆ ಮೇಲೆ ಧಾರ್ಮಿಕ ಭಾವನೆ ಉಳ್ಳವರು ಉರುಳಬಹುದು, ಇದು ತಪ್ಪಲ್ಲ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement