ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚನ್ನಬಸವಣ್ಣ ದೀಪೋತ್ಸವ

Vishwanath S
Updated On : 10 Dec 2013, 12:25 pm

ಕ.ಪ್ರ.ವಾರ್ತೆ ,  ಅರಸೀಕೆರೆ ,  ಡಿ.9
ಕಡೇ ಕಾರ್ತಿಕ ಸೋಮವಾರದ ಅಂಗವಾಗಿ ತಾಲೂಕಿನ ಮಾಡಾಳು ಗ್ರಾಮದ  ತಿರುಮಲೇಶ್ವರ ಸ್ವಾಮಿ ಹಾಗೂ ಗ್ರಾಮದ ಹೊರ ಭಾಗದ ಕೆರೆ ಏರಿ ಮೇಲೆ ನೆಲೆಸಿರುವ ಚನ್ನಬಸವಣ್ಣ ದೇವರ ದೀಪೋತ್ಸವ ಕಾರ್ಯಕ್ರಮ ನೂರಾರು ಭಕ್ತರ ನಡುವೆ  ಸಡಗರ ಸಂಭ್ರಮದಿಂದ ಇತ್ತೀಚೆಗೆ ವಿಜೃಂಭಣೆಯಿಂದ  ನಡೆಯಿತು.
ಕಾರ್ತಿಕ ಮಾಸದ ಕಡೇ ದಿನವಾದ  ಸೋಮವಾರ ಗ್ರಾಮದಲ್ಲಿ ಎಲ್ಲಿ ನೋಡಿದೆಡೆ  ಹಬ್ಬದ ವಾತಾವರಣ ಕಳೆಗಟ್ಟಿತ್ತು. ದೇವಾಲಯವನ್ನು ತಳಿರು ತೋರಣ ಹಾಗೂ ಬಾಳೆಗಿಡಗಳಿಂದ  ಶೃಂಗರಿಸಲಾಗಿತ್ತು. ಅಲ್ಲದೆ ದೇವಾಲಯವನ್ನು  ಹೂವು ಮತ್ತು ಬಣ್ಣ ಬಣ್ಣದ ದೀಪಗಳಿಂದ  ಅಲಂಕರಿಸಲಾಗಿತ್ತು.
ಮುಂಜಾನೆ ಚನ್ನಬಸವಣ್ಣ ದೇವರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಯನ್ನು ಧಾರ್ಮಿಕ  ವಿಧಿ-ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.ಮಹಿಳೆಯರು ಸಣ್ಣ-ಪುಟ್ಟ ಮಕ್ಕಳೊಂದಿಗೆ ದೇವಾಲಯಗಳಿಗೆ ತೆರಳಿ ದೇವರಿಗೆ ಪೂಜೆ ದರ್ಶನ ಪಡೆದರು. ಸಂಜೆ ಸೂರ್ಯಾಸ್ತವಾಗುತ್ತಿದ್ದಂತೆ ದೇವಾಲಯದ ಆವರಣದಲ್ಲಿ ಮಕ್ಕಳೂ ಸೇರಿದಂತೆ ಯುವಕ-ಯುವತಿಯರು ಮಣ್ಣಿನ ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು. ತಿರುಮಲ ದೇವಾಲಯದಲ್ಲಿ ಸಂಭ್ರಮವೋ ಸಂಭ್ರಮ. ಬೆಳಗಿನಿಂದಲೇ ಭಕ್ತರಿಂದ  ದೇವಾಲಯ ತುಂಬಿ ತುಳುಕುತ್ತಿತ್ತು. ಸಂಜೆಯಾಗುತ್ತಿದ್ದಂತೆ ಮಹಿಳೆಯರು ತಂಬಿಟ್ಟು ಆರತಿಯೊಡನೆ ದೇವಾಲಯಕ್ಕೆ ಆಗಮಿಸಿ ದೇವರಿಗೆ  ಪೂಜೆ ಸಲ್ಲಿಸಿ ಆರತಿ ಬೆಳಗಿದರು. ನಂತರ  ಮಹಾ ಮಂಗಳಾರತಿ ಸಲ್ಲಿಸಿದ ನಂತರ  ದೀಪೋತ್ಸವ ಕಾರ್ಯಕ್ರಮಕ್ಕೆ ಬಂದಿದ್ದ ಭಕ್ತಾದಿಗಳಿಗೆ  ಫಲಾಹಾರ ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement