ನಗರದಲ್ಲಿ ಭೀಮ ಜ್ಯುವೆಲರ್ಸ್...
ಹಾಸನ: ಭೀಮ ಪರಂಪರೆಯ ಭೀಮ ಜ್ಯುವಲರ್ಸ್ನ 29ನೇ ಶಾಖೆಯನ್ನು ನಗರದ ಬಿ.ಎಂ.ರಸ್ತೆಯಲ್ಲಿ ಸೋಮವಾರ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಶೋರೂಂ ನ್ನು ಉದ್ಘಾಟಿಸಿ ಮಾತನಾಡಿದ ಸ್ವಾಮೀಜಿ, ಆಭರಣದ ಅಂಗಡಿ ಉತ್ತಮವಾಗಿದ್ದು, ಶುಭವಾಗಲಿ ಎಂದು ಹರಸಿದರು.
ಸಂಸ್ಥೆಯ ಚಿನ್ನದ ವ್ಯವಹಾರವನ್ನು 1925ರಲ್ಲಿ ಪ್ರಾರಂಭಿಸಿತು. ಪ್ರಸ್ತುತ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಹೆಸರಾಂತ ಜ್ಯೂವೆಲ್ಲರಿಯಾಗಿ ಬೆಳೆದಿದೆ ಹಾಗೂ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧಿ ಜ್ಯೂವೆಲ್ಲರಿಗಳಲ್ಲಿ ಒಂದಾಗಿ ರೂಪುಗೊಂಡಿದೆ. ಬೆಂಗಳೂರಿನಲ್ಲಿ ಹಾಗೂ ಉಡುಪಿಯಲ್ಲಿ ಯಶಸ್ವಿಯಾಗಿ ನೆಲೆಯೂರಿರುವ ಭೀಮ ಈಗ ಹೃದಯ ಭಾಗವಾದ ಹಾಸನದಲ್ಲಿ ತನ್ನ ಹೊಸ ಮಳಿಗೆ ಪ್ರಾರಂಭಿಸಿದೆ.
ಮಳಿಗೆಯಲ್ಲಿ ವಜ್ರ ಹಾಗೂ ಪ್ಲಾಟಿನಂ ಆಭರಣಗಳ ಇತ್ತೀಚಿನ ವಿನ್ಯಾಸ ಸಹ ಮಾರಾಟ ಮಾಡಲಾಗುತ್ತದೆ.
ಮಳಿಗೆ ಪ್ರಾರಂಭವಾದ ದಿನದಿಂದ 1ವಾರದವರೆಗೆ ಪ್ರತಿ ಗ್ರಾಮ ಚಿನ್ನ ಖರೀದಿಗೆ 100 ರು.ರಿಯಾಯಿತಿ ನೀಡಲಾಗುತ್ತಿದೆ.
ಪ್ರಥಮ ಗ್ರಾಹಕರಾಗಿ ಭವಾನಿ ರೇವಣ್ಣ ಆಗಮಿಸಿ ಮಾತನಾಡಿ, ಭೀಮ ಜ್ಯುವಲರ್ಸ್ ಉತ್ತಮ ಗುಣಮಟ್ಟದ ಚಿನ್ನಾಭರಣ ಮಾಡುತ್ತಿದ್ದು, ಸಾಕಷ್ಟು ವಿಧವಿಧವಾದ ಆಭರಣ ಮಾರಾಟ ಮಾಡುತ್ತಿದೆ. ಹಾಸನಕ್ಕೆ ಇಂತಹದೊಂದು ಆಭರಣದ ಅಂಗಡಿಯ ಅವಶ್ಯಕತೆ ಇತ್ತು ಎಂದು ಅವರು ಶುಭ ಕೋರಿದರು. ಭೀಮ ಜ್ಯುವಲರ್ಸ್ ವ್ಯವಸ್ಥಾಪಕ ಪಾಲುದಾರ ಬಿ.ಕೃಷ್ಣನ್, ವ್ಯವಸ್ಥಾಪಕ ಪಾಲುದಾರ ವಿಷ್ಣು ಭಟ್, ಸಿಇಒ ರಶ್ಮಿ ಮತ್ತಿತರರು ಇದ್ದರು.