ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಿವೇಶನ ಹಂಚಿಕೆ; 60:40 ಅನುಪಾತ

Vishwanath S
Updated On : 10 Dec 2013, 12:25 pm

ಕ.ಪ್ರ.ವಾರ್ತೆ ,  ಹಾಸನ ,  ಡಿ.9
ಇಲ್ಲಿನ ಎಸ್.ಎಂ.ಕೃಷ್ಣನಗರ ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶೇ. 60:40ರ ಅನುಪಾತದಲ್ಲಿ ಪ್ರಾಧಿಕಾರ ಮತ್ತು ರೈತರಿಗೆ ಹಂಚಲು ತೀರ್ಮಾನ ಕೈಗೊಳ್ಳಲಾಯಿತು.
ನಗರದ ಅಂಬೇಡ್ಕರ್  ಭವನದಲ್ಲಿ ಸೋಮವಾರ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಎಸ್.ಎಂ.ಕೃಷ್ಣನಗರ ವಸತಿ ಬಡಾವಣೆಯಲ್ಲಿ 60:40ರ ಅನುಪಾತದಡಿ ರೈತರಿಂದ ಪರಸ್ಪರ ಒಡಂಬಡಿಕೆ ಒಪ್ಪಂದದ ಕರಾರುಪತ್ರ ಹಾಗೂ ವಸತಿ ಬಡಾವಣೆಯ ಸಮಗ್ರ ಯೋಜನಾ ವರದಿ (ಡಿಪಿಆರ್) ಬಗ್ಗೆ ಎಸ್.ಎಂ.ಕೆ ನಗರದ ರೈತರ ಸಹಯೋಗದೊಂದಿಗೆ ಚರ್ಚಿಸಲು ಪ್ರಾಧಿಕಾರದ ಸಭೆ ನಡೆಯಿತು.
ಜಿಲ್ಲಾಡಳಿತದೊಂದಿಗೆ ಚರ್ಚಿಸಿ: ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಮಾತನಾಡಿ, ನಗರದ ನೂತನ ಎಸ್.ಎಂ.ಕೃಷ್ಣ ಸುಸಜ್ಜಿತ ಬಡಾವಣೆ ಸಮಸ್ಯೆಗಳು ಪೂರ್ಣಗೊಳ್ಳುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಸದ್ಯದಲ್ಲೇ ನಿವೇಶನ ಹಂಚಿಕೆ ಮಾಡುವ ಕಾಲ ಸನ್ನಿಹಿತವಾಗಿದೆ ಎಂದರು.ರೈತರ ಎಲ್ಲಾ ಸಮಸ್ಯೆಗಳಿಗೆ ಪ್ರಾಧಿಕಾರ ಸ್ಪಂದಿಸುತ್ತಾ ಬಂದಿದೆ. ಸರ್ಕಾರದ ಆದೇಶದಡಿಯಲ್ಲಿ ನಿವೇಶನ ಹಂಚಿಕೆ ಮಾಡಲು ಕ್ರಮ ಜರುಗಿಸಲಾಗಿದೆ. ಇದಕ್ಕೆ ರೈತರು ಜಿಲ್ಲಾಡಳಿತದೊಂದಿಗೆ ಸ್ಪಂದಿಸಬೇಕು. 60:40 ಅನುಪಾತದಡಿಯಲ್ಲಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ಭೂಮಿಯಲ್ಲಿ ರೈತರಿಗೆ ಪರಿಹಾರ ಕಲ್ಪಿಸಲಾಗುವುದು. ರೈತರಿಗೆ ಪರಿಹಾರ ಕಲ್ಪಿಸಲು ನಗರಾಭಿವೃದ್ಧಿ ಪ್ರಾಧಿಕಾರವು ಬ್ಯಾಂಕಿನಲ್ಲಿ  ರು. 55 ಕೋಟಿ ಕಾಯ್ದಿರಿಸಲಾಗಿದೆ ಯಾವುದೇ ರೀತಿಯ ವ್ಯತ್ಯಾಸಗಳಿದ್ದಲ್ಲಿ ರೈತರು ಜಿಲ್ಲಾಡಳಿತದೊಂದಿಗೆ ಚರ್ಚಿಸಬಹುದಾಗಿದೆ ಎಂದರು.
ರೈತರ ಪರವಾಗಿ ಮಾತನಾಡಿದ ಮುಖಂಡ ಲಕ್ಷ್ಮಿ ನಾರಾಯಣ ಹಾಗೂ ಲಕ್ಷ್ಮಿಕಾಂತ ನೀಡಿದ ಸಲಹೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಪ್ರಾಧಿಕಾರ ರೈತರ ಬೇಡಿಕೆಗಳನ್ನು ಗೌರವದಿಂದ ಮಾನ್ಯ ಮಾಡುತ್ತದೆ.  ಎಸ್.ಎಂ. ಕೃಷ್ಣನಗರದ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ ವಸತಿ ನಿವೇಶನದಲ್ಲಿ 60: 40 ಅನುಪಾತದಲ್ಲಿ ಪರಿಹಾರ ಕಲ್ಪಿಸಲಾಗುವುದು. ಆದರೆ ವಾಣಿಜ್ಯ ಉದ್ದೇಶಕ್ಕಾಗಿ ಕಾಯ್ದಿರಿಸಿದ ನಿವೇಶನದಲ್ಲಿ ಪರಿಹಾರ ಕಲ್ಪಿಸಲು ಕಾನೂನಿನಲ್ಲಿ ಅವಕಾಶವಿಲ್ಲ ರೈತರು ಸಹರಿಸುವಂತೆ ಮನವಿ ಮಾಡಿದರು.
ರೈತರ ಒಪ್ಪಿಗೆ: ರೈತರು ತಮ್ಮ ಜಮೀನಿನ ಸಂಬಂಧ ಪ್ರಾಧಿಕಾರಕ್ಕೆ ಹಣ ಪಾವತಿ ಸಂದರ್ಭದಲ್ಲಿ ಹೆಚ್ಚುವರಿ ಪಾವತಿಸಿರುವ ಬಡ್ಡಿಯನ್ನು ಕಾನೂನಿನಲ್ಲಿ ಎಷ್ಟು ಮರು ಪಾವತಿಸಲು ಸಾಧ್ಯವೋ ಅದನ್ನು ಪ್ರಾಧಿಕಾರದಿಂದ ರೈತರಿಗೆ ಪಾವತಿಸಲಾಗುವುದು. ಎಸ್.ಎಂ.ಕೃಷ್ಣ ನಗರದ ಬಗ್ಗೆ ಸರ್ಕಾರದಿಂದ ತಯಾರಿಸಲಗಿರುವ ನಕ್ಷೆಯನ್ನು ರೈತರು ಸಮ್ಮತಿಸಿದಲ್ಲಿ ಸಂಕ್ರಾಂತಿ ನಂತರ ನಿವೇಶನಗಳ ಹಂಚಿಕೆಗೆ ಒಂದು ತಿಂಗಳೊಳಗಾಗಿ ಈ ಬಡಾವಣೆಯ ಎಲ್ಲ ್ಲಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಜರುಗಿಸಲಾಗುವುದು ಎಂದರು.
ಅಂತಿಮ ತೀರ್ಮಾನಕ್ಕಾಗಿ ಇನ್ನೊಂದು ವಾರದೊಳಗಾಗಿ ರೈತ ಮುಖಂಡರೊಂದಿಗೆ ಇನ್ನೊಂದು ಸುತ್ತಿನ ಸಭೆ ಕರೆದು ನಿವೇಶನ ಹಂಚಿಕೆ ಪ್ರಕ್ರಿಯೆಗೆ ಸರ್ಕಾರದಿಂದ ಅನುಮೋದನೆ ಪಡೆದು ಶೀಘ್ರದಲ್ಲಿಯೇ ಫಲಾನುಭವಿಗಳಿಗೆ ಕಾನೂನು ರೀತ್ಯ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement