ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

15ರಂದು ರನ್ ಫಾರ್ ಯೂನಿಟಿ ಓಟ

Vishwanath S
Updated On : 11 Dec 2013, 12:57 pm

ಕ.ಪ್ರ.ವಾರ್ತೆ ,  ಹಾಸನ ,  ಡಿ. 10
ವಿಶ್ವದಲ್ಲೇ ಅತೀ ದೊಡ್ಡದಾದ ಸರ್ದಾರ್ ವಲ್ಲಭಾಯ್ ಪಟೇಲ್ ಅವರ ಪ್ರತಿಮೆಯನ್ನು ಗುಜರಾತಿನಲ್ಲಿ ನಿರ್ಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಡಿ. 15ರಂದು ದೇಶಾದ್ಯಂತ ರನ್ ಫಾರ್ ಯೂನಿಟಿ ಓಟ ಹಮ್ಮಿಕೊಂಡಿದ್ದು, ಜಿಲ್ಲೆಯಲ್ಲಿಯೂ ಈ ಓಟನಡೆಯಲಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಹಾಗೂ ಸ್ಟಾಚ್ಯು ಆಪ್ ಯೂನಿಟಿ ಜಿಲ್ಲಾ ಸಂಚಾಲಕ ಅಮಿತ್ ಶೆಟ್ಟಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಬಾಯಿ ಪಟೇಲ್‌ರವರ 600 ಅಡಿಗಳಷ್ಟು ಎತ್ತರದ ಪ್ರತಿಮೆ ನಿರ್ಮಿಸಲಾಗುತ್ತಿದೆ. ಅದಕ್ಕಾಗಿ ಸುಮಾರು ರು. 2 ಸಾವಿರ ಕೋಟಿ ವೆಚ್ಚಮಾಡಲಾಗುತ್ತಿದೆ. ಇದರ ಅಂಗವಾಗಿ ರನ್ ಫಾರ್ ಯೂನಿಟಿ ಓಟವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಮನವಿ: ರನ್ ಫಾರ್ ಯೂನಿಟಿ ಓಟವು ನಗರದ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾಗಿ ಎವಿಕೆ ಕಾಲೇಜು ಮುಖಾಂತರ ಹೇಮಾವತಿ ಪ್ರತಿಮೆ, ಎನ್.ಆರ್. ವೃತ್ತ, ಬಿ.ಎಂ. ರಸ್ತೆ, ಶಂಕರಿಮಠ ರಸ್ತೆ, ಎಂ.ಜಿ. ರಸ್ತೆ, ಮಹಾವೀರ ಭವನದ ಮುಖಾಂತರ ರಾಮಕೃಷ್ಣ ವಿದ್ಯಾಲಯದಲ್ಲಿ ಕೊನೆಯಾಗಲಿದೆ. ಇದಕ್ಕೆ ಜಿಲ್ಲೆಯ ಜನರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಸಹಿ ಸಂಗ್ರಹ: ಡಿ. 15ರಂದು ಸರ್ದಾರ್ ಪಟೇಲರ ಪುಣ್ಯ ತಿಥಿಯಾಗಿದ್ದು, ಅಂದು ಓಟವನ್ನು ಹಮ್ಮಿಕೊಳ್ಳಲಾಗಿದೆ. ಮನೆ ಮನೆಗೆ ಸರ್ದಾರ್ ಪಟೇಲ್‌ರವರ ಬದುಕು, ಸಾಧನೆಗಳ ಸಾಹಿತ್ಯದ ಪ್ರಸಾರ. ಅತಿ ಹೆಚ್ಚು ಜನರ ಸಹಿ ಸಂಗ್ರಹದ ಮೂಲಕ ಅಭಿಯಾನದಲ್ಲಿ ಸಹಯೋಗಿಗಳಾಗುವಂತೆ ಸಂಗ್ರಹ ಮಾಡಲಾಗುತ್ತದೆ ಎಂದರು. ಆದ್ದರಿಂದ ರನ್ ಫಾರ್ ಯೂನಿಟಿ ಓಟವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸ್ಟಾಚ್ಯು ಆಫ್ ಯೂನಿಟಿ ಲೋಹ ಸಂಗ್ರಹ ಸಹಕಾರ ಸಮಿತಿ ಸಂಚಾಲಕ ವಿಜಯ್ ಕುಮಾರ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement