ಇಂದು ವಿದ್ಯುತ್ ವ್ಯತ್ಯಯ
ಹಾಸನ: ತುರ್ತು ವಿದ್ಯುತ್ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 11ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಗರದ ನಾನಾ ಕಡೆ ವಿದ್ಯುತ್ ವ್ಯತ್ಯಯವಾಗಲಿದೆ. ನಗರದ ಸಂತೇಪೇಟೆ, ತಣ್ಣೀರುಹಳ್ಳ, ಸಿದ್ದಯ್ಯನಗರ, ದೊಡ್ಡಮಂಡಿಗನಹಳ್ಳಿ, ಚಿಕ್ಕಮಂಡಿಗನಹಳ್ಳಿ, ದೇವರಾಯಪಟ್ಟಣ, ವಿಜಯನಗರ, ಗುಡ್ಡೇನಹಳ್ಳಿ, ಮಣಚನಹಳ್ಳಿ ಮುಂತಾದ ಸ್ಥಳಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಚೆಸ್ಕಾಂನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ. ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಹಾಸನ ನಗರ ಉಪವಿಭಾಗ ವ್ಯಾಪ್ತಿಯ ಸಂತೇಪೇಟೆ ವೃತ್ತದಿಂದ ತಣ್ಣೀರುಹಳ್ಳದವರೆಗೆ ರಸ್ತೆ ಅಗಲಿಕರಣ ಕಾಮಗಾರಿ ನಡೆಯಲಿದ್ದು, ರಸ್ತೆ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುತ್ತಿರುವುದರಿಂದ ವಿದ್ಯುತ್ ವ್ಯತ್ಯಯವಾಗುತ್ತಿದೆ ಎಂದು ಹೇಳಿದ್ದಾರೆ.
ಮಟ್ಕಾ ದಂಧೆಕೋರರ ಬಂಧನ: ಜೈಲಿಗೆ ರವಾನೆ
ಹಾಸನ: ಜಿಲ್ಲೆಯಲ್ಲಿ ನಿರಂತರವಾಗಿ ಮಟ್ಕಾ ಜೂಜು ನಡೆಸುತ್ತಿದ್ದ ನಗರದ ಇಬ್ಬರನ್ನು ಬಂಧಿಸಿ ಗುಲ್ಬರ್ಗ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ನಿರಂತರವಾಗಿ ಮಟ್ಕಾ ಜೂಜಾಟದ ಬುಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಜಯನಗರದ ಆರ್ಯಭಟ ರಸ್ತೆಯ ವಾಸಿ ಪಾಪೇಶ್ ಅಲಿಯಾಸ್ ಎಚ್. ಕೆ. ಉಮಾಶಂಕರ್ (38) ಹಾಗೂ ರಂಗೋಲಿ ಹಳ್ಳ ನಿವಾಸಿ ಹೇಮಂತ್ ಅಲಿಯಾಸ್ ಟ್ಯಾಕ್ಸಿ ಹೇಮಂತ್ (36) ಅವರನ್ನು ಬಂಧಿಸಿ ಗುಲ್ಬರ್ಗ ಜೈಲಿಗೆ ಕಳುಹಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚೆನ್ನಣ್ಣನವರ್ ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಈ ಇಬ್ಬರನ್ನು ಕರ್ನಾಟಕ ಭಟ್ಟಿ ಸರಾಯಿ ಇಳಿಸುವವರು, ಔಷಧ ಕಾನೂನು ಉಲ್ಲಂಘಿಸುವವರು, ಜೂಜುಕೋರರು, ಗೂಂಡಾಗಳು, ಅನೈತಿಕ ವ್ಯವಹಾರಗಳ ವೃತ್ತಿಯಲ್ಲಿ ತೊಡಗುವವರು ಮತ್ತು ಕೊಳಚೆ ಪ್ರದೇಶದ ಆಕ್ರಮಣದಾರರು ಹಾಗೂ ಅಪಾಯಕಾರಿ ಚಟುವಟಿಕೆಗಳ ತಡೆಕಾಯ್ದೆ 1985ರ ಕಲಂ 3ರನ್ವಯ ಬಂಧನಾದೇಶ ನೀಡಿದ್ದಾರೆ ಅದರನ್ವಯ ಅವರನ್ನು ವಶಕ್ಕೆ ಪಡೆದು ಗುಲ್ಬರ್ಗಾ ಕಾರಾಗೃಹಕ್ಕೆ ರವಾನಿಸಲಾಗಿದೆ. ಈ ಇಬ್ಬರು ನಿರಂತರವಾಗಿ ಜಿಲ್ಲೆಯಲ್ಲಿ ಮಟ್ಕಾ, ಜೂಜು ದಂಧೆ ನಡೆಸುತ್ತಿದ್ದು, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದರು.
ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಮತ್ತು ಈಗಾಗಲೇ ಆರೋಪಿಗಳ ಮೇಲೆ ಹಿಂದೆಯೂ ಪ್ರಕರಣಗಳು ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ತಿಳಿಸಿದ್ದಾರೆ.
ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಅರ್ಜಿ ಆಹ್ವಾನ
ಹಾಸನ: ಕೇಂದ್ರ ಸರ್ಕಾರದ ನಾನಾ ರಾಜ್ಯಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆಗೆ ಅನುಗುಣವಾದ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳನ್ನು ಒಂದೇ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲು ಅರ್ಭ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿ. 13ಕ್ಕೆ 10ನೇ ತರಗತಿ (ಎಸ್ಸೆಸ್ಸೆಲ್ಸಿ) ಪಾಸಾಗಿದ್ದು, 2014ರ ಜ.1ಕ್ಕೆ 18ರಿಂದ 25 ವರ್ಷದೊಳಗಿರಬೇಕು. ಗರಿಷ್ಠ ವಯೋವುತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಒಬಿಸಿ(ಕೇಂದ್ರ) ಇವರಿಗೆ ಕ್ರಮವಾಗಿ 5 ಮತ್ತು 3 ವರ್ಷಗಳ ರಿಯಾಯಿತಿ ಇರುತ್ತದೆ. ಢಿಢಿಢಿ.ಡಡ್ಛ್ಟಟಿಟ್ಝಟಿಜ.ಟ್ಝ್ಛಿ.್ಝಟಿ ಅಥವಾ ಢಿಢಿಢಿ.ಡಡ್ಛ್ಟಟಿಟ್ಝಟಿಜ2.್ಜ್ಟಢ.್ಝಟಿ ಈ ವೆಬಬ್ಸೈಟಟ್ಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಡಿಡಿಠಣಣಣಡಡ್ಛ.ಟ್ಝ್ಛಿ.್ಝಟಿ ವೆಬ್‌ಸೈಟ್‌ನಲ್ಲಿರುವ ಅರ್ಜಿ ನಮೂನೆಯ ಪ್ರಿಂಟ್ ತೆಗೆದುಕೊಂಡು ಭರ್ತಿ ಮಾಡಿ ಅಂಚೆ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮತ್ತು ಅರ್ಜಿ ನಮೂನೆಗಾಗಿ ಢಿಢಿಢಿ.ಡಡ್ಛ್ಞ್ಞ್ಠ.್ಞಛ್ಠ.ಟ್ಝ್ಛಿ.್ಝಟಿ ವೆಬ್‌ಸೈಟ್ ನೋಡಿ ಅಥವಾ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ಇವರನ್ನು ದೂ. 0821-2516844, ಮೊಬೈಲ್ 9449686641 ಸಂಪರ್ಕಿಸಿ.
ನಾನಾ ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಾಸನ: ಬೆಂಗಳೂರಿನ ಸಿಆರ್‌ಪಿಎಫ್ ವತಿಯಿಂದ ನಾನಾ ಹುದ್ದೆಗಳ ಡ್ರೈವರ್, ಫಿಟ್ಟರ್, ಬಗ್ಲರ್, ಟೈಲರ್, ಕೋಬ್ಲರ್, ಕಾರ್ಪೆಂಟರ್, ಗಾರ್‌ಡನರ್, ಕುಕ್, ವಾಟರ್ ಕ್ಯಾರಿಯರ್, ವಾಷರ್‌ಮನ್, ಸಫಾಯಿ ಕರ್ಮಚಾರಿ, ಬಾರ್ಬರ್, ಬ್ರಾಸ್ ಬಬ್ಯಾಂಡ್ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪಾಸಾಗಿರುವ 18ರಿಂದ 23 ವರ್ಷದೊಳನವರಾಗಿದ್ದು, (ಪ. ಜಾತಿ, ಪ. ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ಹಾಗೂ ಒ.ಬಿ.ಸಿ ಅಭ್ಯರ್ಥಿಗಳಿಗೆ 3 ವರ್ಷಗಳ ರಿಯಾಯಿತಿ ಇದೆ.) 170 ಸೆಂ.ಮೀ ಹಾಗೂ (ಪುರುಷರಿಗೆ) 157 ಸೆ.ಮೀ (ಮಹಿಳೆಯರಿಗೆ) ಎತ್ತರ, ಎದೆ ಸುತ್ತಳತೆ 80 ಸೆಂ.ಮೀ (ಪುರುಷರಿಗೆ) ಪ.ಜಾತಿ, ಪ. ಪಂಗಡ, ಒಬಿಸಿ - 76 ಸೆಂ.ಮೀ, ವಯೋವುತಿಗೆ ಅನುಸಾರವಾಗಿ ತೂಕವಿರಬೇಕು. ಕೇಂದ್ರ ಸರ್ಕಾರದ ನಿಯಮಾನುಸಾರ ವೇತನ ನೀಡಲಾಗುವುದು. ಅರ್ಜಿ ಸಲ್ಲಿಸಲು ಡಿ. 23 ಕಡೇ ದಿನ. ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಚಾಲಕ ಪರವಾನಗಿ ಪಡೆದಿರಬೇಕು ಫಿಟ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐ.ಟಿ.ಐ - ಫಿಟ್ಟರ್ ಟ್ರೇಡ್‌ನಲ್ಲಿ ತೇರ್ಗಡೆ ಹೊಂದಿ ಸರ್ಟಿಫಿಕೇಟ್ ಇತರೆ ಹುದ್ದೆಗಳಿಗೆ ಸಂಬಂಧಿಸಿದ ವೃತ್ತಿಯಲ್ಲಿ ಅನುಭವ ಪ್ರಮಾಣ ಪತ್ರ ಪಡೆದಿರಬೇಕು.
ಅರ್ಜಿ ನಮೂನೆಯ ಮಾದರಿಯು ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಲಭ್ಯವಿದ್ದು ಉದ್ಯೋಗಾಧಿಕಾರಿಗಳನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಹಾಗೂ ನಮೂನೆ ಮಾದರಿಯನ್ನು ಪಡೆಯುವಂತೆ ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮಿ ಕೋರಿದ್ದಾರೆ.
ಪ್ರಶಸ್ತಿಗೆ ನಾಮ ನಿರ್ದೇಶನ ಸ್ವೀಕಾರ
ಹಾಸನ: ಅತ್ಯುನ್ನತ ಸೇವೆಗೈದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ನಾಮ ನಿರ್ದೇಶನ ಆಹ್ವಾನಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರು, ಅಧಿಕಾರಿ ಸಿಬ್ಬಂದಿಗಳ ಪರವಾಗಿ ಪ್ರಶಸ್ತಿ ಆಯ್ಕೆಗೆ ನಾಗರೀಕರೂ ಕೂಡ ನಾಮ ನಿರ್ದೇಶನ ಸಲ್ಲಿಸಬಹುದಾಗಿದ್ದು, ಡಿ. 31ರೊಳಗೆ ಉಪ ವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ, ಹಾಸನ ಇವರಿಗೆ ನಾಮ ನಿರ್ದೇಶನ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ.
ವಿದ್ಯಾರ್ಥಿವೇತನ
ಅರಸೀಕೆರೆ: ನೊಳಂಬ ವೀರಶೈವ ಸಂಘವು ಪ್ರತಿವರ್ಷವೂ ತಾಂತ್ರಿಕ, ಕೃಷಿ, ವೈದ್ಯಕೀಯ ಹಾಗೂ ಸ್ನಾತಕೋತ್ತರ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ಪ್ರತಿಭಾವಂತ ನೊಳಂಬ ವೀರಶೈವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡತೊಡಗಿದೆ. ಈ ಹಿನ್ನೆಲೆಯಲ್ಲಿ 2013-14ನೇ ಸಾಲಿನ ವಿದ್ಯಾರ್ಥಿ ವೇತನಕ್ಕೆ ಸಂಘ ಅರ್ಜಿ ಆಹ್ವಾನಿಸಿದ್ದು ಆಸಕ್ತರು ನೊಳಂಭ ವೀರಶೈವ ಸಂಘ, ಕಂಬಿ ಎಂ. ಸಿದ್ದರಾಮಣ್ಣ, ವಿದ್ಯಾರ್ಥಿ ನಿಲಯ 1ಎ, 1ನೇ ಎ ಅಡ್ಡರಸ್ತೆ, 3ನೇ ಹಂತ, 4ನೇ ವಿಭಾಗ, ಬಸವೇಶ್ವರ ನಗರ, ಬೆಂಗಳೂರು ಇಲ್ಲಿಗೆ ಸ್ವ ವಿಳಾಸದ ಲಕೋಟೆಯನ್ನು ಕಳುಹಿಸಿ ಅಂಚೆ ಮೂಲಕ ಅರ್ಜಿ ಪಡೆಯಬಹುದಾಗಿದೆ ಎಂದು ತಾಲೂಕು ನೊಳಂಬ ವೀರಶೈವ ಸಂಘದ ಗೌರವ ಕಾರ್ಯದರ್ಶಿ ಆರ್. ರಾಮೇಗೌಡ ತಿಳಿಸಿದ್ದಾರೆ.