ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದತ್ತಮಾಲೆಗೆ 500 ಕಾರ್ಯಕರ್ತರು

Vishwanath S
Updated On : 11 Dec 2013, 12:58 pm

ಕ.ಪ್ರ.ವಾರ್ತೆ ,  ಬೇಲೂರು ,  ಡಿ.10
ಡಿ. 14, 15 ಹಾಗೂ 16ರಂದು ನಡೆಯುವ ಶ್ರೀ ದತ್ತ ಜಯಂತಿಗೆ ನಾಡಿನಿಂದ ಸಾವಿರಾರು ಜನರು ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಬೇಲೂರಿನಿಂದ 500 ಜನರು ದತ್ತ ಪೀಠಕ್ಕೆ ಪ್ರಯಾಣ ಬೆಳೆಸುತ್ತಾರೆ ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ತಿಳಿಸಿದರು.
ಪಟ್ಟಣದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಹತ್ತಿರದ ದತ್ತಪೀಠ ಹಿಂದೂಗಳ ಭಕ್ತಿ ಶ್ರದ್ದಾ ಕೇಂದ್ರವಾಗಿದೆ, ಇಂತಹ ಪವಿತ್ರ ಸ್ಥಾನಕ್ಕೆ ಪ್ರತಿ ವರ್ಷ ಸಾವಿರಾರು ಭಕ್ತರು ತೆರಳಿ ಸ್ವಾಮಿಯ ಪಾದುಕೆಗಳ ದರ್ಶನ ಪಡೆಯುತ್ತಿದ್ದಾರೆ. ಈ ದಿಸೆಯಲ್ಲಿ ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ತೆರಳುವುದಾಗಿ ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಹಿರಿಯ ಕಾರ್ಯಕರ್ತ ಹಾಲಪ್ಪಶೆಟ್ಟಿ ಮಾತನಾಡಿ, ಹಿಂದೂ ದೇಶದಲ್ಲಿ ಹಿಂದೂಗಳ ಬದುಕು ದುಸ್ಥಿತಿಯಾಗಿದೆ. ಕಾರಣ ನಮ್ಮನ್ನಾಳುವ ರಾಜಕಾರಣಿಗಳ ಓಟು ಬ್ಯಾಂಕ್ ಪವಿತ್ರ ಹಿಂದೂ ಧರ್ಮಕ್ಕೆ ಕೊಡಲಿ ಪೆಟ್ಟು ನೀಡಿದೆ ಎಂದ ಅವರು, ಶ್ರೀದತ್ತ ಮಾಲೆ ಅಭಿಯಾನ ಹಿಂದೂಗಳ ಸಂಘಟನೆಯ ಸಂದೇಶ ನೀಡಬೇಕು ಎಂದು ತಿಳಿಸಿದರು. ತಾಲೂಕು ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಆಶೋಕ್, ಅಭಿಗೌಡ, ರಾಜೀವ್, ಶಿವಕುಮಾರ್, ಪೂರ್ಣೇಶ್, ದೀಪ್, ಸಂಪತ್ ಹಾಗೂ ನೂರಾರು ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement