ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಫಲಾನುಭವಿಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ

Vishwanath S
Updated On : 11 Dec 2013, 12:57 pm

ಹೊಳೆನರಸೀಪುರ: ಇಲ್ಲಿನ ಕಂದಾಯ ಇಲಾಖೆಯ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ನೀಡಲಾಗುವ ನಾನಾ ವೇತನ ಸವಲತ್ತುಗಳು ಹಾಗೂ ಆಹಾರ ಇಲಾಖೆಯ ವತಿಯಿಂದ ನೀಡಲಾಗುವ ಬಿಪಿಎಲ್ ಪಡಿತರ ಚೀಟಿಗಳನ್ನು ಶಾಸಕ ಎಚ್.ಡಿ. ರೇವಣ್ಣ ಇತ್ತೀಚೆಗೆ   ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ಫಲಾನುಭವಿಗಳಿಗೆ ವಿತರಿಸಿದರು.
ನಂತರ ಮಾತನಾಡಿದ ಅವರು, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ ಹಾಗೂ ಸಂಧ್ಯಾಸುರಕ್ಷಾ ಯೋಜನೆಯಡಿಯಲ್ಲಿ 139 ಫಲಾನುಭವಿಗಳಿಗೆ ವೇತನವನ್ನು ಅನುಮೋದಿಸಿ ನೀಡಲಾಗಿದೆಯಲ್ಲದೇ, ಅಂತ್ಯಸಂಸ್ಕಾರ ಸಹಾಯ ನಿಧಿ ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿಯಲ್ಲಿನ 106 ಫಲಾನುಭವಿಗಳಿಗೆ ಸಹಾಯ ಧನವನ್ನು ನೀಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿಯಲ್ಲಿ ತಾಲೂಕಿನ 110 ಫಲಾನುಭವಿಗಳಿಗೆ ತಲಾ 10ಸಾವಿರ ರೂಗಳ ಚೆಕ್‌ಗಳು ಬಂದಿದ್ದು, ಕೆಲವೇ ದಿನಗಳಲ್ಲಿ ಅವುಗಳನ್ನು ವಿತರಿಸಲಾಗುವುದು ಎಂದು ಹೇಳಿದ ಶಾಸಕ ಎಚ್.ಡಿ. ರೇವಣ್ಣ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಕೈತಪ್ಪಿರುವ ಅರ್ಹ ಫಲಾನುಭವಿಗಳ ಪಟ್ಟಿ ಮಾಡಿ, ವಿವಿಧ ವೇತನಗಳು ಹಾಗೂ ಸರ್ಕಾರದ ಯೋಜನೆಗಳಡಿಯಲ್ಲಿ ನ್ಯಾಯಯುತವಾಗಿ ಸಿಗಬೇಕಾದ ವೇತನಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಶಾಸಕರು ತಹಸೀಲ್ದಾರ್‌ಗೆ ಸೂಚಿಸಿದರು.
ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷರು ಹಾಗೂ ಹೋರಾಟಗಾರ ನೆಲ್ಸನ್ ಮಾಂಡೇಲಾ ನಿಧನದ ಪ್ರಯುಕ್ತವಾಗಿ ಸರಳವಾಗಿ ಆಚರಿಸಲಾದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಆರ್.ಬಿ.ಶಿವಶಂಕರಪ್ಪ, ತಹಸೀಲ್ದಾರ್ ಗ್ರೇಡ್-2 ಪ್ರಸನ್ನ ಮೂರ್ತಿ, ಶಿರಸ್ತೇದಾರ್ ಉಲಿವಾಲ ಮೋಹನ್ ಕುಮಾರ್, ತಾಪಂ ಇಓ ತಮ್ಮಣ್ಣಗೌಡ, ಆಹಾರ ಇಲಾಖೆಯ ರಾಮಚಂದ್ರ, ರಾಜಸ್ವ ನಿರೀಕ್ಷ ನಾಗರಾಜು, ಗ್ರಾಮ ಲೆಕ್ಕಾಧಿಕಾರಿಗಳಾದ ಅಸ್ಲಂ ಪಾಷ, ಶಿವಕುಮಾರ್, ಯೋಗೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement