ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಗರ್‌ಹುಕುಂ ಭೂಮಿ ಸಕ್ರಮ ಮಾಡಿ

Vishwanath S
Updated On : 11 Dec 2013, 12:56 pm

ಕ.ಪ್ರ.ವಾರ್ತೆ ,  ಹಾಸನ ,  ಡಿ. 10
ಬಗರ್ ಹುಕುಂ ಸಾಗುವಳಿ ಸಕ್ರಮ, ಭೂಮಿ, ವಸತಿ, ನಾಗರೀಕ ಸೌಲಭ್ಯಗಳು, ಪಡಿತರ ಚೀಟಿ, ಶೇ. 25ರಷ್ಟು ಹಣ ದುರುಪಯೋಗ ಮತ್ತು ದಲಿತ ವಿದ್ಯಾರ್ಥಿ ನಿಲಯಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಆರೋಪ: ರಾಜ್ಯದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ದಲಿತರು, ಬಡವರು, ಕೂಲಿ, ಕಾರ್ಮಿಕರು, ಕೃಷಿಕರು ತಮ್ಮ ಒಪ್ಪತ್ತಿನ ಕೂಲಿಗಾಗಿ ಪರಿತಪ್ಪಿಸುವುವುದು ಮಾತ್ರ ತಪ್ಪಿಲ್ಲ. ಅಧಿಕಾರಕ್ಕೆ ಬರುವ ಮುನ್ನ ದಲಿತರ ಉದ್ಧಾರದ ಬಗ್ಗೆ ಶೋಷಣೆ ಬಗ್ಗೆ ಮತ್ತು ಸಂಕಷ್ಟಗಳ ಬಗ್ಗೆ ದಿನ ನಿತ್ಯ ಬೀಗುವ ರಾಜಕಾರಣಿಗಳು ಗೆದ್ದ ನಂತರ ಆ ಬಗ್ಗೆ ಚಕಾರ ಎತ್ತುವುದಿಲ್ಲ. ಅಮಾಯಕ ಮುಗ್ಧ ಜನರು ಹಸಿವು ಬಡತನದ ಬೇಕೆ ತಾಳಲಾರದೆ ರಾಜಕಾರಣಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗಿ ಬದುಕುತ್ತಿರುವ ಪರಿಸ್ಥಿತಿ ಇನ್ನೂ ಬದಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಸರ್ಕಾರಗಳಿಂದ ಬಬೆಲೆ ನಿಯಂತ್ರಿಸಲಾಗದೇ ಜನ ಸಾಮಾನ್ಯರು ಪರಿತಪಿಸಬೇಕಾಗಿದೆ. ರಾಜಕಾರಣಿಗಳು, ಅಧಿಕಾರಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ದರ್ಬಾರು ನಡೆಸುತ್ತಿರುವುದು ಶೋಚನೀಯವಾಗಿದ್ದು, ಈ ಎಲ್ಲಾ ಅಸಮಾನತೆ ಶೋಷಣೆ ಸರ್ಕಾರದ ರೀತಿ ನೀತಿಗಳು, ವಸತಿ ಸಮಸ್ಯೆಗಳು, ನಾಗರೀಕ ಸಮಸ್ಯೆಗಳು, ದಲಿತ ವಿದ್ಯಾರ್ಥಿ ನಿಲಯಗಳ ಅವ್ಯವಸ್ಥೆ, ಪಡಿತರ ಚೀಟಿ, ಶೇ.25ರಷ್ಟು ಮೀಸಲು ಹಣ ದುರುಪಯೋಗ, ದಲಿತರ ಮೇಲಿನ ದೌರ್ಜನ್ಯಗಳು ಮತ್ತು ದಲಿತರಿಗಾಗಿ ಇರುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ಅಧಿಕಾರಿಗಳ ಕಾರ್ಯ ವೈಖರಿ ಸರಿಯಿಲ್ಲ ಎಂದು ಆರೋಪಿಸಿದರು.
ಬೇಡಿಕೆಗಳು: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕು. ಭೂ ಹೀನ ದಲಿತರಿಗೆ ಭೂಮಿಯನ್ನು ನೀಡಬೇಕು. ವಸತಿ ಹೀನ ಎಲ್ಲಾ ಬಡವರಿಗೆ ವಸತಿ ಯೋಜನೆಯಡಿಯಲ್ಲಿ ಕೂಡಲೇ ಮನೆಗಳನ್ನು ನಿರ್ಮಿಸಿ ಕೊಡಬೇಕು. ದಲಿತರು ವಾಸಿಸುವ ಕಾಲೋನಿಗಳಿಗೆ ಕೂಡಲೇ ಪಡಿತರ ಚೀಟಿ, ನೀರು, ದಾರಿದೀಪ, ಒಳಚರಂಡಿ ಮುಂತಾದ ನಾಗರೀಕ ಸೌಲಭ್ಯಗಳನ್ನು ನೀಡಬೇಕು. ರಾಜ್ಯದಲ್ಲಿ ದಲಿತರಿಗಾಗಿ ಮೀಸಲಿರುವ ಶೇ. 25ರಷ್ಟು ಹಣ ದುರುಪಯೋಗವಾಗುತ್ತಿರುವುದನ್ನು ಕೂಡಲೇ ನಿಲ್ಲಿಸಿ ಸಮರ್ಪಕವಾಗಿ ದಲಿತರ ಅಭಿವೃದ್ಧಿಗೆ ಬಳಸಬೇಕು.
ಭೂಮಿ ದಲಿತರಿಗೆ ಹಂಚಿ: ಸಕಲೇಶಪುರ ಮಿನಿ ವಿಧಾನಸೌಧದ ಮುಂಭಾಗ ಡಾ.ಬಿ.ಆರ್. ಅಂಬೇಡ್ಕರ್‌ರವರ ಪ್ರತಿಮೆ ನಿರ್ಮಾಣವಾಗಬೇಕು. ಸಕಲೇಶಪುರ ತಾಲೂಕಿನ ಕಸಬಾ ಹೋಬಳಿಯ ದೊಡ್ಡನಾಗರ ಗ್ರಾಮದಲ್ಲಿ 150 ಜನ ನಿವೇಶನ ರಹಿತರಿದ್ದು, ಆ ಗ್ರಾಮದ ಸರ್ವೇ ನಂ.45ರಲ್ಲಿ 20 ಎಕರೆ ಸರ್ಕಾರಿ ಗೋಮಾಳವಿದ್ದು, ಅದರಲ್ಲಿ 5 ಎಕರೆ ಭೂಮಿಯನ್ನು ನಿವೇಶನಕ್ಕಾಗಿ ಮೀಸಲಿಡಬೇಕು. ಅರಕಲಗೂಡು ತಾಲೂಕಿನ ಕಸಬಾ ಹೋಬಳಿಯ ಹೆತ್ತಗೋಡನಹಳ್ಳಿ ಗ್ರಾಮದ ಸರ್ವೇ ನಂ. 13ರಲ್ಲಿ 2.20 ಎಕರೆ ಸರ್ಕಾರಿ ಭೂಮಿಯನ್ನು ಕಳ್ಳಿಮುದ್ದನಹಳ್ಳಿ ಗ್ರಾಮದ ದಲಿತರ ನಿವೇಶನಕ್ಕಾಗಿ ಆಶ್ರಯ ಯೋಜನೆಯಡಿಯಲ್ಲಿ ಕಾಯ್ದಿರಿಸಿದ್ದು, ಆ ಗ್ರಾಮದ ಭೂ ಮಾಲೀಕರಾದ ಶಾಂತಮ್ಮ ಎಂಬವರು ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದನ್ನು ತೆರವುಗೊಳಿಸಿ ದಲಿತರಿಗೆ ಹಂಚಬೇಕು ಎಂದು ಒತ್ತಾಯಿಸಿದರು. ಅರಕಲಗೂಡು ತಾಲೂಕಿನ ದೊಡ್ಡ ಹೋಬಳಿ ಮುತ್ತುಗದ ಹೊಸೂರು ಗ್ರಾಮದ ಸರ್ವೇ ನಂ. 14ರಲ್ಲಿ ಆ ಗ್ರಾಮದ 8 ದಲಿತ ಕುಟುಂಬಗಳು ಸುಮಾರು 30ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದು, ಹಾಸನದ ಜಿಲ್ಲಾಧಿಕಾರಿಗಳು ಇವರೆಗೂ 9.5 ಗುಂಟೆ ನಿವೇಶನಕ್ಕಾಗಿ ಕಾಯ್ದಿರಿಸಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಇವರಿಗೆ ಹಕ್ಕುಪತ್ರ ನೀಡಬೇಕು. ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದ ಸರ್ವೇ ನಂ.30ರಲ್ಲಿ 2 ಎಕರೆ ಸ್ಮಶಾನಕ್ಕೆ 1 ಎಕರೆ ಸರ್ಕಾರಿ ಶಾಲೆ, 1 ಎಕರೆ ಸಾರ್ವಜನಿಕ ಆಸ್ಪತ್ರೆ, 3 ಎಕರೆ ನಿವೇಶನಕ್ಕಾಗಿ ಗ್ರಾಮ ಪಂಚಾಯ್ತಿ ಕಾಯ್ದಿರಿಸಿದ ಜಾಗವನ್ನು ದೇವಿ ಪ್ರಸಾದ್ ಎಂಬವರು 6 ತಿಂಗಳಿಂದ ಒತ್ತುವರಿ ಮಾಡಿಕೊಂಡು ಬೇಸಾಯ ಮಾಡುತ್ತಿರುವುದನ್ನು ಬಿಡಿಸಬೇಕು.
ಸ್ಮಶಾನಕ್ಕೆ ಭೂಮಿ: ಸಕಲೇಶಪುರ ತಾಲೂಕಿನ ಬ್ಯಾಕರವಳ್ಳಿ ಪಂಚಾಯ್ತಿ ಐರವಳ್ಳಿ ಕೂಡಿಗೆ ಬಳಿ ಸಾರ್ವಜನಿಕ ಬಸ್ತ್‌ಂಗುದಾಣ ನಿರ್ಮಿಸುವುದು. ಸಕಲೇಶಪುರ ತಾಲೂಕಿನ ವಳಲಹಳ್ಳಿ ಗ್ರಾಮದ ಸರ್ವೇ ನಂ. 63ರಲ್ಲಿ ಅರಣ್ಯ ಇಲಾಖೆಯಲ್ಲಿ ಇರುವ ಭೂಮಿಯನ್ನು ಕಂದಾಯ ಇಲಾಖೆಗೆ ಪರಿವರ್ತಿಸಿ ಆ ಗ್ರಾಮದ ನಿವೇಶನ ರಹಿತರಿಗೆ ನೀಡಬೇಕು. ತಾಲೂಕಿನ ಬಿರಡಹಳ್ಳಿ ಗ್ರಾಮದ ದಲಿತರ ಶವ ಸಂಸ್ಕಾರಕ್ಕೆ ಸ್ಮಶಾನವಿಲ್ಲಂದತಾಗಿದ್ದು, ಪರಿಶೀಲಿಸಿ ಸ್ಮಶಾನಕ್ಕೆ ಭೂಮಿ ಕಾಯ್ದಿರಿಸಬೇಕು ಎಂದರು.
ರಾಜ್ಯದಲ್ಲಿ ದಲಿತರು ಸರ್ಕಾರಿ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು, ಸರ್ವೇ ನಂ.53ರ ಅಡಿಯಲ್ಲಿ ಅರ್ಜಿ ಹಾಕಿಕೊಳ್ಳಲಾಗದ ಮುಗ್ಧ ದಲಿತರಿಗೆ ಪುನಃ ಅರ್ಜಿ ಹಾಕಲು ಅವಕಾಶ ನೀಡಬೇಕು. ಅರಕಲಗೂಡು ತಾಲೂಕಿನ ದೊಡ್‌ಡಮಗ್ಗೆ ಹೋಬಳಿಯ ಕೊರಟಿಕೆರೆ ಕಾವಲ್ ಸರ್ವೇ ನಂ.1ರಲ್ಲಿ ಸುಮಾರು 30ಕ್ಕೂ ಹೆಚ್ಚು ದಲಿತ ಮತ್ತು ಇತರ ಕುಟುಂಬಗಳು 30 ವರ್ಷಗಳಿಂದ ಭೂಮಿಯನ್ನು ಸಾಗುವಳಿ ಮಾಡುತ್ತಿದ್ದು, ಫಾರಂ ನಂ. 53ಕ್ಕೆ ಸಲ್ಲಿಸಿದ್ದು, ಸರ್ವೇ ಕೂಡ ಮುಗಿದಿದ್ದು, ಕೂಡಲೇ ಈ ಬಡ ಕುಟುಂಬಗಳಿಗೆ ಸಾಗುವಳಿ ಪತ್ರ ನೀಡಬೇಕು.
ಅರಕಲಗೂಡು ತಾಲೂಕಿನ ಕಸಬಾ ಹೋಬಳಿಯ ಮೋಕಲಿ ಗ್ರಾಮದ ಸರ್ವೇ ನಂ.99ರಲ್ಲಿ 20-20 ಎಕರೆ ಸರ್ಕಾರಿ ಭೂಮಿಯನ್ನು ಆ ಗ್ರಾಮದ ಸುಮಾರು 33 ದಲಿತ ಕುಟುಂಬಗಳು ಸುಮಾರು 20 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದು, ಫಾರಂ ನ. 53 ಅರ್ಜಿ ಸಲ್ಲಿಸಿದ್ದು, ಈ ಭೂಮಿಯ ಸರ್ವೇ ಕೂಡ ಪೂರ್ಣಗೊಂಡಿದ್ದು, ಇವರಿಗೆ ಕೂಡಲೇ ಹಕ್ಕು ಪತ್ರ ನೀಡುವುದು. ಕೋಮುವಾದಿಗಳಿಂದ ಜಿಲ್ಲೆಯಲ್ಲಿ ಮುಸ್ಲಿಂ ಮತ್ತು ಅಲ್ಪಸಂಖ್ಯಾತರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವುದು. ಮುಸ್ಲಿಂ ಮಹಿಳಾ ಸಂಘಗಳಿಗೆ ನ್ಯಾಯ ಬೆಲೆ ಅಂಗಡಿ ಮೀಸಲಾಯಿ ಕಲ್ಪಿಸತಕ್ಕದ್ದ ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳಾದ ವಿ. ನಾಗರಾಜು, ಎಚ್.ಎನ್.ರಾಜಶೇಖರ್, ಅಣ್ಣಯ್ಯ, ಹನುಮಯ್ಯ, ಜಿಲ್ಲಾ ಪದಾಧಿಕಾರಿಗಳಾದ ರಮೇಶ್ ದೊಡ್ಡನಾಗರ, ಕೃಷ್ಣ ಕಣಿಯಾರ್, ಅಪ್ಸರ್, ಫಯಾಜ್, ಸಾಜಿದಾ ಬೇಗಂ, ಹನೀಫ್, ಪುಟ್ಟರಾಜು, ಬಿರಡಹಳ್ಳಿ ಕಲ್ಗಣೆ, ಮೀಸೆ ಮಂಜಯ್ಯ, ಲೋಕನಾಥ್, ರಾಮಣ್ಣ ಕೊಣನೂರು, ಮುಮ್ತಾಜ್, ಪರಮೇಶ್, ಧರ್ಮರಾಜ್, ಸುರೇಶ್, ರಾಜು, ಕೃಷ್ಣ, ಲೋಕೇಶ್, ನಂಜೇಶ್, ಶಾಂತರಾಜು ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement