ಇಂದು ಅರಳೀಕಟ್ಟೆ ಪ್ರಾರಂಭೋತ್ಸವ
ಹಾಸನ: ಕುವೆಂಪುನಗರದ ಜನತಾ ಬಜಾರ್ ಬಳಿ ಜೀರ್ಣೋದ್ಧಾರಗೊಂಡಿರುವ ಅರಳೀಕಟ್ಟೆಯ ಪ್ರಾರಂಭೋತ್ಸವ ಮತ್ತು ನವಗ್ರಹ ಮೂರ್ತಿಗಳ ಪ್ರತಿಷ್ಠಾಪನಾ ಸಮಾರಂಭವನ್ನು ಡಿ. 14 ಮತ್ತು 15ರಂದು ಆಯೋಜಿಸಲಾಗಿದೆ.
ಡಿ. 14ರಂದು ಬೆಳಗ್ಗೆ 9ರಿಂದ ಮಂಗಳವಾದ್ಯದೊಂದಿಗೆ ನೂತನ ನವಗ್ರಹ ಮೂರ್ತಿಗಳನ್ನು ಅರಳೀಕಟ್ಟೆಗೆ ತರಲಾಗುವುದು. ಸುವಾಸಿನಿಯರಿಂದ ಗಂಗಾಪೂಜೆ ಮತ್ತು ಗೋಪೂಜೆ ನಡೆಯಲಿದೆ. ಬೆಳಗ್ಗೆ 10ರಿಂದ ಶ್ರೀಗಣಪತಿ ಪೂಜೆ ಪುಣ್ಯಾ ದೇವನಾಂದಿ, ಕಂಕಣಧಾರಣೆ ಹೋಮ, ಪೂರ್ಣಾಹಿತ ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ 7ರಿಂದ ನವಗ್ರಹ ಮೂರ್ತಿಗಳ ಅಧಿವಾಸ, ವಾಸ್ತು ಹೋಮಗಳು, ಅಷ್ಟಬಂಧ ಪ್ರತಿಷ್ಠೆ ಬಲಿಪ್ರದಾನ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಲಿದೆ.
ಡಿ.15 ರಂದು ಬೆಳಗ್ಗೆ 7ಕ್ಕೆ ಹೋಮ, ನವಗ್ರಹ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಅಶ್ವತ್ಥ ವೃಕ್ಷದ ವಿವಾಹ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಧಕರಿಗೆ ಗೌರವಾರ್ಪಣೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಮಧ್ಯಾಹ್ನ 1.30ಕ್ಕೆ ಪ್ರಸಾದ ಭೋಜನ ನಡೆಯಲಿದೆ. ಸಂಜೆ 6ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಡಿ ತಾಲೂಕು ಕಸಾಪ ವತಿಯಿಂದ ಜಾನಪದ, ಭಕ್ತಿ ಗೀತೆ ಗಾಯನ ಏರ್ಪಡಿಸಲಾಗಿದೆ. ಡಿ.15ರ ಬೆಳಗ್ಗೆ 9ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಏರ್ಪಡಿಸಿದ್ದು, ರು. 100 ಪೂಡಾ ಕಾಣಿಕೆ ಪಾವತಿಸಬೇಕು. ಆಸಕ್ತರು ಸಮಿತಿಯ ಸದಸ್ಯರಿಂದ ಕೂಪನ್ ಪಡೆದು ಸಹಕರಿಸಬೇಕಾಗಿ ಅರಳೀಕಟ್ಟೆ ಜೀರ್ಣೋದ್ಧಾರ ಸೇವಾ ಸಮಿತಿ ಮನವಿ ಮಾಡಿದೆ.