ಕಳಾಕರ್ಷಣ ಪುನರ್ ಪ್ರತಿಷ್ಠಾಪನೆ
ಜಾವಗಲ್: ಇಲ್ಲಿನ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಕಳಾಕರ್ಷಣ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವು ಜ. 31, ಫೆ. 1, 2 ರಂದು ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜೆ.ಆರ್.ವಸಂತ್ ಕುಮಾರ್ ತಿಳಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಸಂರಕ್ಷಣಾ ಕಾರ್ಯವು ಪೂರ್ಣವಾಗಿದ್ದು ವೈಖಾನಸ ಆಗಮರೀತ್ಯ ದೇಗುಲದ ಕಳಾಕರ್ಷಣ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ತಹಸೀಲ್ದಾರ್ ಸೂಚನೆ ಮೇರೆಗೆ ನಾಡಕಚೇರಿ ಉಪತ ತಹಸೀಲ್ದಾರ್ ಅಶೋಕ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿ ತೀರ್ಮಾನಿಸಲಾಯಿತು.
ಅಶೋಕ್ ಮಾತನಾಡಿ, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಗ್ರಾಮಸ್ಥರ ಸಹಕಾರ ಅಗತ್ಯವೆಂದರು. ರಾಜಸ್ವ ನಿರೀಕ್ಷಕ ಮುದ್ದುವೀರಯ್ಯ ಮಾತನಾಡಿ 3 ದಿನಗಳ ಕಾರ್ಯಕ್ರಮವನ್ನು ವಿಧಿವಿಧಾನಗಳ ಪ್ರಕಾರ ನಿರ್ವಹಿಸಲು ಸರ್ವರ ಸಹಕಾರ ಮುಖ್ಯವೆಂದರು.
ಬ್ರಾಹ್ಮಣ ಸಮಾಜದ ಅಧ್ಯಕ್ಷ ಜೆ.ಎನ್. ರಮೇಶ್ ಜೋಯಿಸ್, ಕಾರ್ಯದರ್ಶಿ ಜೆ.ಎಸ್.ಶ್ರೀಕಂಠಯ್ಯ, ಅರ್ಚಕ ಜೆ.ಸಿ. ನಾರಾಯಣಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಜೆ.ಬಿ. ಕೇಂಗೇಗೌಡ ಮಾತನಾಡಿದರು. ಸಭೆಯಲ್ಲಿ ಜೆ.ಕೆ. ಕುಮಾರ್, ಜೆ. ಆರ್. ಸುಬ್ರಮಣ್ಯ, ಕೆ.ಜಿ. ರಾಜೇಗೌಡ, ಜೆ.ಸಿ. ಗೋಪಾಲಕೃಷ್ಣ, ಗಣೇಶ, ಜೆ.ಕೆ. ಸುಬ್ಬರಾಯ ಇದ್ದರು.