ಜಾಜೂರು ದುರ್ಗಮ್ಮ ದೇವಾಲಯದಲ್ಲಿ ಕಾರ್ತೀಕ ಮಹೋತ್ಸವ
ಅರಸೀಕೆರೆ: ಜಾಜೂರು ಗ್ರಾಮದ ಗ್ರಾಮದೇವತೆ ಶ್ರೀ ದುರ್ಗಮ್ಮ ಮತ್ತು ಶ್ರೀ ಪ್ಲೇಗಿನಮ್ಮ ದೇವಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಮಹೋತ್ಸವದ ಅಂಗವಾಗಿ ವಿಶೇಷ ಕದಲಿ ಪೂಜೆ, ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಾಜೂರು ಹಾಗೂ ಸುತ್ತಮುತ್ತ ಗ್ರಾಮದ ಗ್ರಾಮಸ್ಥರು ಹಾಗೂ ಭಕ್ತರು ಇದ್ದರು. ದೇವಾಲಯದ ಆವರಣದಲ್ಲಿ ಅಲಂಕೃತ ವಿದ್ಯುತ್ ದೀಪಗಳ ಅಲಂಕಾರ ಹಾಗೂ ಸಾಲು ನಂದಾ ದೀಪಗಳನ್ನು ಹಚ್ಚಲಾಗಿತ್ತು. ಜಾಜೂರು ಗ್ರಾಮದಲ್ಲಿ ಶ್ರೀ ದುರ್ಗಮ್ಮ, ಶ್ರೀ ಪ್ಲೇಗಿನಮ್ಮ ದೇವಿ, ಶ್ರೀ ಚಿಕ್ಕಮ್ಮ ದೇವಿ ಶ್ರೀ ಪುರದಮ್ಮ ದೇವಿಯವರ ಉತ್ಸವ ಏರ್ಪಡಿಸಲಾಗಿತ್ತು. ಉತ್ಸವಕ್ಕೆ ಕರಡೆ ಮಜಲು, ಅರೆವಾದ್ಯ ಉತ್ಸವಕ್ಕೆ ಮೆರುಗು ನೀಡಿತ್ತು.
ಈ ಉತ್ಸವ ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ, ಉಪಾಧ್ಯಕ್ಷೆ ವಸಂತ ಹೊನ್ನಪ್ಪ, ಅರಸೀಕೆರೆ ಪುರಸಭೆ ಸದಸ್ಯ ಬಾಲಮುರಗನ್, ಜಾಜೂರಿನ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರು, ಅರ್ಚಕ ಪೂಜಾರ್ ಕೃಷ್ಣಮೂರ್ತಿ, ದಸಂಸ ಜಿಲ್ಲಾ ಕಾರ್ಯದರ್ಶಿ ಆನಂದ್, ರಂಗನಾಥ್, ಮಂಜುನಾಥ್ ಇತರರು ಇದ್ದರು. ಬಂದ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.