ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ರೈತರಿಗೆ ಸಕಲ ಸವಲತ್ತು: ಮಹದೇವಪ್ಪ

Vishwanath S
Updated On : 14 Dec 2013, 12:11 pm

ಹೊಳೆನರಸೀಪುರ: ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಅಭಿವೃದ್ಧಿಯನ್ನೇ ಮೂಲ ಮಂತ್ರವನ್ನಾಗಿಸಿಕೊಂಡಿರುವ ಕಾವೇರಿ ಗ್ರಾಮೀಣ ಬ್ಯಾಂಕ್, ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ರೀತಿಯ ಎಲ್ಲಾ ಸವಲತ್ತುಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಕಾವೇರಿ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಮಹದೇವಪ್ಪ ತಿಳಿಸಿದರು.
ತಾಲೂಕಿನ ಜೋಡಿಗುಬ್ಬಿ ಗ್ರಾಮದಲ್ಲಿದ್ದ ಕಾವೇರಿ ಗ್ರಾಮೀಣ ಬ್ಯಾಂಕನ್ನು ಇತ್ತೀಚೆಗೆ  ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ವಾರ್ಷಿಕ ಮೂರು ಲಕ್ಷ ರೂ ವಹಿವಾಟಿನೊಂದಿಗೆ ಆರಂಭಗೊಂಡ ಜೋಡಿಗುಬ್ಬಿ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕು ಶಾಖೆ ಇಂದು ಸುಮಾರು ಮೂವತ್ತೆರಡು ಕೋಟಿ ರು. ವಹಿವಾಟು ನಡೆಸಿ ರೈತರ ಆರ್ಥಿಕ ಸಬಲತೆಗೆ ಕಾರಣವಾಗಿದೆ ಎಂದು ನುಡಿದರು.
ಆಶಯ: ಜೋಡಿಗುಬ್ಬಿ ಗ್ರಾಮದಲ್ಲಿ 1983 ರಲ್ಲಿ ಬ್ಯಾಂಕಿನ ಶಾಖೆಯು ಆರಂಭಗೊಂಡಿದ್ದು, ಇಲ್ಲಿಯವರೆಗೆ ಸಾಕಷ್ಟು ರೈತರ ಆಗು ಹೋಗುಗಳಿಗೆ ಸ್ಪಂದಿಸಿದೆ ಎಂದು ತಿಳಿಸಿದ ಅವರು, ಇಂದಿಗೂ ಸಹ ರೈತರು ತಮ್ಮ ದೈನಂದಿನ ವ್ಯವಹಾರ ವಹಿವಾಟಿಗೆ ಸಾಲ ಪಡೆಯುವುದರ ಜತೆಗೆ ಬ್ಯಾಂಕು ಗ್ರಾಹಕರ ಅನುಕೂಲಕ್ಕಾಗಿ  ಕನಕದಾರ, ಲಕ್‌ಪತಿ, ಕಾವೇರಿಲಕ್ಷ್ಮಿ ಠೇವಣಿಗಳಲ್ಲಿ ಹಣವನ್ನು ತೊಡಗಿಸುವುದರ ಮೂಲಕ ಬ್ಯಾಂಕಿಗೆ ಒತ್ತಾಸೆ ಆಗಬೇಕೆಂಬ ಆಶಯ ವ್ಯಕ್ತಪಡಿಸಿದರು.
ಭದ್ರತೆಗೆ ಕಾರಣ: ಗ್ರಾಮದಲ್ಲಿ ಸ್ತ್ರೀಶಕ್ತಿ ಸಂಘಗಳು ಬ್ಯಾಂಕ್ ನೀಡುವ ಸಾಲವನ್ನು ಪಡೆದು ಸದುಪಯೋಗ ಪಡಿಸಿಕೊಂಡು ಹೈನುಗಾರಿಕೆ ಚಟುವಟಿಕೆ ಕೈಗೊಂಡಿ ಆರ್ಥಿಕ ಸಬಲತೆಗೆ ಕಾರಣವಾಗುವಂತೆ ಕೋರಿದ ಅವರು ಈಗ ಬ್ಯಾಂಕು ಸುಮಾರು ಹತ್ತು ಕೋಟಿ ರು. ಠೇವಣಿಯೊಂದಿಗೆ ಸುಭದ್ರತೆಗೆ ಕಾರಣವಾಗಿದೆ ಎಂದರು.
ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ನಾಗರಾಜು, ನಿಡುವಣಿ ಗ್ರಾಮ ಪಂಚಾಯ್ತಿ  ಅಧ್ಯಕ್ಷೆ ಮಣಿ, ಸದಸ್ಯ ಫಣಿರಾಜು, ನಿವೃತ್ತ ಸರ್ಕಲ್ ಇನ್‌ಸ್ಪೆಕ್ಟರ್ ಚಂದ್ರೇಗೌಡ, ಜಿ.ಸಿ.ಮಂಜೇಗೌಡ ಇತರರು ಇದ್ದರು. ವ್ಯವಸ್ಥಾಪಕ ಎ.ಸಿ. ಮಂಜೇಗೌಡ ಸ್ವಾಗತಿಸಿದರು. ಶಿವಕುಮಾರ್ ನಿರೂಪಿಸಿದರು ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement