ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಒಡೆಯರ್ ನಿಧನದ ದುಃಖದಲ್ಲಿ ಜನತೆ

Vishwanath S
Updated On : 15 Dec 2013, 1:18 am

ಅರಸೀಕೆರೆ: ಮೈಸೂರು ರಾಜ್ಯ ವಂಶದ ಕೊನೆಯ ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನರಾದ ಸುದ್ದಿಯಿಂದ ದುಃಖತಪ್ತವಾದ ತಾಲೂಕಿನ ಜನತೆ ಇನ್ನೂ ಅದರಿಂದ ಹೊರಬಂದಿಲ್ಲ.
ಮೈಸೂರಿನ ಸಂಸ್ಥಾನದ ಅಧಿನಕ್ಕೆ ಒಳಪಟ್ಟಿದ್ದ ಅರಸೀಕೆರೆಯಲ್ಲಿ ರಾಜರ ಆಳ್ವಿಕೆಯ ಹಲವು ಕುರುಹುಗಳು ಇಂದಿಗೂ ಜೀವಂತ ಸಾಕ್ಷಿಯಾಗಿದೆ ಈ ಪೈಕಿ ಪ್ರಮುಖವೆಂದರೆ ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆರಂಭವಾದ ರೇಲ್ವೆ ಸೇವೆ. ನಾಲ್ವಡಿ ಕೃಷ್ಣರಾಜ ಒಡೆಯರ ಆಶಯದಂತೆ ಮೈಸೂರಿನಿಂದ ಅರಸೀಕೆರೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಉಗಿಬಂಡಿ ಚಲಿಸಿತು.
ಆಗಾಗ ಭೇಟಿ: ಮೈಸೂರು ರಾಜ ಮನೆತನದ ಸ್ನೇಹವನ್ನು ತಾಲೂಕಿನ ಕೆಲವರು ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪೈಕಿ ಕೆ. ವೆಂಕಟಸ್ವಾಮಿಯವರು ಜಯಚಾಮರಾಜೇಂದ್ರ ಒಡೆಯರಿಗೆ ತೀವ್ರ ಆಪ್ತರಾಗಿದ್ದರು.
ಆಸ್ಪತ್ರೆ ಸೇವೆ: ಈ ಸ್ನೇಹದ ಕುರುಹಾಗಿ ಪಟ್ಟಣದಲ್ಲಿ ಸರಕಾರಿ ಆಸ್ಪತ್ರೆ ಆರಂಭಿಸಲು ಅಧಿಕಾರಿಗಳು ಸೂಕ್ತ ಸ್ಥಳ ಹುಡುಕುತ್ತಿದ್ದ ಸಂದರ್ಭದಲ್ಲಿ ವೆಂಕಟಸ್ವಾಮಿಯವರು ಜಯಚಾಮರಾಜೇಂದ್ರ ಒಡೆಯರ ಹೆಸರನ್ನ ಆಸ್ಪತ್ರೆಗೆ ಇಡಬೇಕೆಂಬ ಷರತ್ತಿನ ಮೇಲೆ ಎಂಟು ಎಕರೆಗೂ ಹೆಚ್ಚಿನ ಜಾಗವನ್ನ ಉಚಿತವಾಗಿ ನೀಡಿದ್ದರು.
ಕಂಬನಿ: ಶಾಸಕ ಕೆ.ಎಂ. ಶಿವಲಿಂಗೇಗೌಡ ತೀವ್ರ ಸಂತಾಪ ವ್ಯಕ್ತಪಡಿಸಿ ಮೈಸೂರನ್ನ ಒಂದು ಸಾಂಸ್ಕೃತಿಕ ನಗರವನ್ನಾಗಿ ಮಾಡುವಲ್ಲಿ ಮೈಸೂರು ಒಡೆಯರ ವಂಶದ ಪಾತ್ರ ಮಹತ್ವದಾಗಿದ್ದು ಅಲ್ಲದೇ ಕೆ.ಆರ್.ಎಸ್. ಅಣೆಕಟ್ಟು ನಿರ್ಮಾಣವಾಗುವುದರಲ್ಲಿ ಸಹ ಇವರ ಕೊಡುಗೆ ಅಪಾರವಾಗಿದೆ ಎಂದಿದ್ದಾರೆ.
ಕೆ.ವಿ. ವೆಂಕಟಸ್ವಾಮಿ ಕುಟುಂಬದವರು ಹಾಗೂ ಮಾಜಿ ಶಾಸಕ ಕೆ.ಪಿ. ಪ್ರಭುಕುಮಾರ್, ಜಿ.ಎಸ್. ಪರಮೇಶ್ವರಪ್ಪ, ಎ.ಎಸ್. ಬಸವರಾಜ್, ಜಿ.ಪಂ. ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ, ಪುರಸಭಾಧ್ಯಕ್ಷ ಮೋಹನ್ ಕುಮಾರ್, ಎಪಿಎಂಸಿ  ಅಧ್ಯಕ್ಷ ಅಜ್ಜಪ್ಪ, ಪುರಸಭಾ ಮಾಜಿ ಅಧ್ಯಕ್ಷ ಸಿದ್ದರಾಮಶೆಟ್ಟಿ, ಬಿಜೆಪಿ ಹರಳಕಟ್ಟ ರಮೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಂಜೀಗೆರೆ ಬಸವರಾಜು, ಜಿಲ್ಲಾ ವಕ್ತಾರ ಎನ್.ಡಿ. ಪ್ರಸಾದ್, ನಗರಾಧ್ಯಕ್ಷ ಹಿರಣ್ಣಯ್ಯ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಪಟೇಲ್ ಶಿವಪ್ಪ, ಹಿರಿಯ ಮುಖಂಡ ಮಲ್ಲೇನಹಳ್ಳಿ ಶಿವಶಂಕರಸ್ವಾಮಿ ಇನ್ನಿತರರು ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement