ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾಹಿತ್ಯ ಸಮ್ಮೇಳನಕ್ಕೆ ನೋಂದಣಿಗೆ ಮನವಿ

Vishwanath S
Updated On : 15 Dec 2013, 1:19 am

ಹೊಳೆನರಸೀಪುರ: ಮಡಿಕೇರಿಯಲ್ಲಿ  ಜ.7ರಿಂದ ಜ.9ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ತಮ್ಮ ನೋಂದಣಿಗಾಗಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ, ಕಾರ್ಯದರ್ಶಿ ಟಿ.ಎಸ್. ಕುಮಾರಸ್ವಾಮಿ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಆಸಕ್ತರು ಡಿ. 15ರೊಳಗೆ ನೋಂದಣಿ ಶುಲ್ಕ ರು. 300 ನೀಡಿ ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಸಮ್ಮೇಳನಕ್ಕೆ ಹೋಗುವ ಸರ್ಕಾರಿ ನೌಕರರಿಗೆ  ಪತ್ರವನ್ನು ಜಿಲ್ಲಾ ಸಂಘದಿಂದ ನೀಡಲಾಗುವುದು.
ಇಂದು ಕೆಂಚರಾಯಸ್ವಾಮಿ ರಥೋತ್ಸವ
ಅರಸೀಕೆರೆ: ಪಟ್ಟಣದ ಮೆಳೆಯಮ್ಮದೇವಿ ಹಾಗೂ ಚಿಕ್ಕಮ್ಮದೇವಿ, ಧೂತರಾಯಸ್ವಾಮಿ ಹಾಗೂ ಕೆಂಚರಾಯಸ್ವಾಮಿ ಅವರ ಮಹಾರಥೊತ್ಸವ ಡಿ. 15ರಂದು ಮಧ್ಯಾಹ್ನ 12ಕ್ಕೆ ನೆರವೇರಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಡಿ.13ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಅಮ್ಮನವರಿಗೆ ಮೂಲಸ್ಥಾನದಲ್ಲಿ, ಅಮ್ಮನವರ ಸಿಡಿ, ರಾತ್ರಿ 7 ಗಂಟೆಗೆ ಆರತಿ ಬಾನ ಹಾಗೂ ಮಹಾಮಂಗಳಾರತಿ ನಡೆಯಲಿದೆ. 14ರ ಶನಿವಾರ ಗೂಧೋಳಿ ಲಗ್ನದಲ್ಲಿ ಗಂಗಾಪೂಜೆ, 15ರಂದು ಮಹಾರಥೋತ್ಸವ ನಡೆಯಲಿದ್ದು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಸಮಸ್ತ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಸೇವಾ ಸಮಿತಿ ಮನವಿ ಮಾಡಿದೆ.
ನಾಳೆ ಆರೋಗ್ಯ ತಪಾಸಣೆ ಶಿಬಿರ
ಮೈಸೂರು: ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ವಾಜಪೇಯಿ ಆರೋಗ್ಯಶ್ರೀ ಯೋಜನೆಯಡಿ ಡಿ. 16ರ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಅರಕಲಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ.  ಹೃದ್ರೋಗ ಶಸ್ತ್ರಚಿಕಿತ್ಸೆ, ನರರೋಗ ಶಸ್ತ್ರಚಿಕಿತ್ಸೆ, ಮೂತ್ರರೋಗ, ಗ್ರಂಥಿ ಶಸ್ತ್ರಚಿಕಿತ್ಸೆ ಹಾಗೂ ವಿವಿಧ ದೈಹಿಕ ಅಘಾತಗಳ ತಪಾಸಣೆ ನಡೆಸಲಿದೆ. ಹೆಚ್ಚಿನ ಮಾಹಿತಿಗೆ ಮೊ. 9620325258 ಸಂಪರ್ಕಿಸಬಹುದು ಎಂದು ಮಾರುಕಟ್ಟೆ ಮುಖ್ಯಸ್ಥ ಆರ್. ಅಶೋಕ್ ತಿಳಿಸಿದ್ದಾರೆ.
ಕಣುವಮ್ಮದೇವಿ ಕಾರ್ತಿಕೋತ್ಸವ
ಜಾವಗಲ್: ಜಾವಗಲ್ ಹೋಬಳಿ ಸಿಂಗಟಗೆರೆ ಪಾಳ್ಯದಲ್ಲಿ ಕಡೆ ಕಾರ್ತೀಕೋತ್ಸವದ ಅಂಗವಾಗಿ ಶ್ರೀಜೇನುಕಲ್ ಸಿದ್ದೇಶ್ವರ ಸ್ವಾಮಿಯವರ ಸಮ್ಮುಖದಲ್ಲಿ ಗ್ರಾಮದೇವತೆ ಶ್ರೀಕಣುವಮ್ಮದೇವಿ, ಹೋತನಕಲ್ಲಮ್ಮದೇವಿ, ಮೆಳಿಯಮ್ಮದೇವಿಯವರ ಮೆರವಣಿಗೆ ನಡೆಯಿತು.
ಉತ್ಸವಮೂರ್ತಿಗಳನ್ನು ದೀಪಾಲಂಕೃತ ವಾಹನದಲ್ಲಿ ಪುಷ್ಪಾಲಂಕರ ಮಾಡಿ ಊರಿನ ಪ್ರಮುಖಬೀದಿಗಳಲ್ಲಿ ಕೀಲುಕುದುರೆ, ವೀರಗಾಸೆಕುಣಿತ, ವಾದ್ಯಗೋಷ್ಠಿಯೊಂದಿಗೆ ಊರಿನ ಎಲ್ಲಾ ಬೀದಿಗಳಲ್ಲೂ ಮೆರವಣಿಗೆ ನಡೆಸಲಾಯಿತು.
ನಂತರ ದುಗ್ಗುಳ ಸೇವೆಸಲ್ಲಿಸಿ, ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಹರಳಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ಉತ್ಸವ
ಹಾಸನ: ನಗರದ ಹರಳಳ್ಳಿಯಲ್ಲಿ ವಿಜೃಂಭಣೆಯ ಅಯ್ಯಪ್ಪಸ್ವಾಮಿ ಉತ್ಸವವನ್ನು ಶನಿವಾರ ನಡೆಸಲಾಯಿತು. ಅಯ್ಯಪ್ಪನ ಮಾಲೆಧಾರಿಗಳು ಶಬರಿಮಲೈಗೆ ತೆರಳುವ ಹಿನ್ನಲೆಯಲ್ಲಿ ಅದ್ಧೂರಿಯ ಉತ್ಸವ ನಡೆಯಿತು.
ದೊಡ್ಡಕೊಂಡಗುಳದ ಶ್ರೀ ಬೆಂಕಿಯಮ್ಮ ಮತ್ತು ಶ್ರೀ ಗಿಡ್ಡಮ್ಮ ಹಾಗೂ ಹರಳಳ್ಳಿಯ ಶ್ರೀ ಲಕ್ಷ್ಮಿದೇವಿ, ಶ್ರೀ ಆಂಜನೇಯ ದೇವರನ್ನು ಕೂಡ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಆನೆ ಮೇಲೆ ಅಯ್ಯಪ್ಪನ ದೇವರನ್ನು ಕುಳ್ಳಿರಿಸಿ ಮೆರವಣಿಗೆ ಸಾಗಲಾಯಿತು. ಮೆರವಣಿಗೆಯಲ್ಲಿ ಗೋವುಗಳನ್ನು ಸಿಂಗರಿಸಿ, ಬೆದರು ಬೊಂಬೆ, ಡೊಳ್ಳು ಕುಣಿತ, ಬ್ಯಾಂಡ್‌ಸೆಟ್, ಕೀಲು ಕುದುರೆ, ಹಾಸ್ಯ ಬೊಂಬೆ, ವೀರಗಾಸೆ ಕುಣಿತ, ಮಹಿಳೆಯರಿಂದ ಕಳಸ ಸೇರಿದಂತೆ ನಾನಾ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿಬಂದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement