ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪ್ರತಿಭಾ ಕಾರಂಜಿಯಿಂದ ಮನೋವಿಕಾಸ

Vishwanath S
Updated On : 17 Dec 2013, 12:27 pm

ಬೇಲೂರು: ಮುಗ್ದ ಮಕ್ಕಳಲ್ಲಿ ಇರುವ ಸುಪ್ತ ಪ್ರತಿಭೆಯನ್ನು ಹೊರ ತರುವ ಮೂಲಕ ಪ್ರತಿಭಾ ಕಾರಂಜಿ ಸಾಮಾನ್ಯಕ್ಕೆ ಜ್ಞಾನಕ್ಕೆ ಪೂರಕವಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ.ಸುಂದ್ರೇಶ್ ಹೇಳಿದರು.
ಪಟ್ಟಣದ ವಿಶ್ವ ಸಂಯುಕ್ತ ಶಾಲೆಯಲ್ಲಿ ಜಿಪಂ, ತಾಪಂ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿರಿಯ ಪ್ರಾಥಮಿಕ ಶಾಲೆಗಳ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ದೇಶ ಅಮೂಲ್ಯ ಸಂಸ್ಕೃತಿಯನ್ನು ಹೊಂದಿದೆ. ಅದರೆ ವಿದೇಶದ ಗಾಳಿಯಿಂದ ನಮ್ಮ ಸಂಸ್ಕೃತಿ ನಾಶವಾಗುತ್ತಿದೆ ಎಂದು ವಿಷಾದಿಸಿದರು.
ಜಿಪಂ ಸದಸ್ಯ ಬಿ.ಡಿ.ಚಂದ್ರೇಗೌಡ ಮಾತನಾಡಿ, ನಾಗರಿಕತೆಯ ನಾಗಾಲೋಟದಲ್ಲಿ ನಮ್ಮ ಭವ್ಯ ಜನಪದ ಕಲೆ ಹಾಗೂ ಸಾಹಿತ್ಯ ಮರೆಯಾಗುತ್ತಿದೆ. ಈ ದಿಸೆಯಲ್ಲಿ ಮಕ್ಕಳಿಗೆ ಜನಪದ ನಾಡು, ನುಡಿ ಸಾಹಿತ್ಯ ಕಲೆ ಇವುಗಳ ಬಗ್ಗೆ ತಿಳಿವಳಿಕೆ ಮೂಡಿಸಿದಾಗ ಮುಂದೆ ನಾಡು-ನುಡಿಯ ಬಗ್ಗೆ ಗೌರವ ಇಟ್ಟುಕೊಳ್ಳುತ್ತಾರೆ. ಪ್ರತಿಭಾ ಕಾರಂಜಿ ಮಕ್ಕಳ ಮನೋವಿಕಾಸಕ್ಕೆ ನಾಂದಿ ಹಾಡುತ್ತದೆ ಎಂದರು.
ವಿಶ್ವ ಪದವಿಪೂರ್ವ ಕಾಲೇಜು ಪ್ರಾಶುಂಪಾಲ ಜಯಕುಮಾರ್ ಮಾತನಾಡಿ, ಇಂದಿನ ಮಕ್ಕಳಿಗೆ ಕೇವಲ ದೈಹಿಕ ಬೆಳೆವಣಿಗೆಗೆ ಪೋಷಕರು ಮಹತ್ವ ನೀಡಿದೆ ಮಕ್ಕಳಲ್ಲಿನ ಪ್ರತಿಭೆಗೆ ಸೂಕ್ತ ಅವಕಾಶ ನೀಡಬೇಕು. ಪಠ್ಯದ ಜತೆಯಲ್ಲಿ ಇಂತಹ ಚಟುವಟಿಕೆಗಳು ಕಾರ್ಯ ನಿರ್ವಹಿಸಿದಾಗ ಮಾತ್ರ ಮಕ್ಕಳು ಭವ್ಯ ಭಾರತದ ಪ್ರಜೆಯಾಗಲು ಸಾಧ್ಯವಾಗುತ್ತದೆ ಎಂದರು.
ಜಿಪಂ ಸದಸ್ಯೆ ಹೇಮಾವತಿ ಮಂಜುನಾಥ್, ಜಿ.ಟಿ.ಇಂದಿರಾ ಧರ್ಮಪ್ಪ, ತಾಲೂಕು ದೈಹಿಕ ಮುಖ್ಯಶಿಕ್ಷಕ ರಂಗಸ್ವಾಮಿ, ನೌಕರರ ಸಂಘದ ಬಿ.ಸಿ.ಆನಂದ್, ಭದ್ರೇಗೌಡ, ವೀರೇಶ್, ನಿವೃತ್ತ ದೈಹಿಕ ಶಿಕ್ಷಕ ಚಂದ್ರಶೇಖರ್ ಆರಾಧ್ಯ, ನಾರಾಯಣ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement