ತಾಪಂ ಅಧ್ಯಕ್ಷರಾಗಿ ಶಾಂತಮ್ಮ ಆಯ್ಕೆ
ಕ.ಪ್ರ.ವಾರ್ತೆ , ಬೇಲೂರು , ಡಿ.20
ತಾಲೂಕು ಪಂಚಾಯ್ತಿ ಅಧ್ಯಕ್ಷರಾಗಿ ಬೇಣ್ಣೂರು ಕ್ಷೇತ್ರದ ಬಿಜೆಪಿಯ ಶಾಂತಮ್ಮಮಹದೇವಯ್ಯ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಬೇಲೂರು ತಾಲೂಕು ಪಂಚಾಯ್ತಿ 2ನೇ ಅವಧಿಗೆ ಸಾಮಾನ್ಯ ಮಹಿಳೆಗೆ ಮೀಸಲಾದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು ಮೊದಲ ಬಾರಿಗೆ ಜೆಡಿಎಸ್‌ನ ಸುಮಿತ್ರರುದ್ರಯ್ಯ ಅಧಿಕಾರದ ನಂತರ ಒಪ್ಪಂದದಂತೆ ಎರಡನೆ ಅವಧಿಗೆ ಬಿಜೆಪಿಯ ಶಾಂತಮ್ಮಮಹದೇವಯ್ಯ ಒಬ್ಬರೇ ನಾಮ ಪತ್ರ ಸಲ್ಲಿಸಿರುವುದರಿಂದ ಇವರನ್ನು ಚುನಾವಣಾಧಿಕಾರಿಯಾಗಿದ್ದ ಸಕಲೇಶಪುರ ಉಪ ವಿಭಾಗಾಧಿಕಾರಿ ಶರತ್ ಅವರು ಬಿಜೆಪಿಯ ಬೆಣ್ಣೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಂತಮ್ಮಮಹದೇವಯ್ಯ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು. ನೂತನ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಮ್ಮ ಮಹದೇವಯ್ಯ ಮಾತನಾಡಿ, ಬೇಲೂರು ತಾಲೂಕಿನಲ್ಲಿರುವ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ದೀಪ ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಕಲೇಶಪುರ ಉಪ ವಿಭಾಗಾಧಿಕಾರಿ ಶರತ್, ಕಾರ್ಯನಿರ್ವಾಹಣಾಧಿಕಾರಿ. ಬಸವರಾಜು ಕಲ್ಲಪ್ಪ ಅಯ್ಯಣನವರ್, ಸಕಲೇಶಪುರ ಉಪ ವಿಭಾಗಾಧಿಕಾರಿ ಕಚೇರಿಯ ಉಪ ತಹಸೀಲ್ದಾರ್ ಬಸವರಾಜು, ತಾಲೂಕು ಪಂಚಾಯ್ತಿ ಎಲ್ಲಾ ಸದಸ್ಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.