ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಇಟಿ ವಿವಾದ: ಸರ್ಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

Vishwanath S
Updated On : 21 Dec 2013, 1:12 am

ಕ.ಪ್ರ.ವಾರ್ತೆ ,  ಸಕಲೇಶಪುರ ,  ಡಿ. 20  
ಅಕ್ಷರ ಭಾಗ್ಯವನ್ನು ಬಡವರಿಂದ ಕಿತ್ತುಕೊಳ್ಳಲು ಹೋರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪಟ್ಟಣದ ನಾನಾ ಕಾಲೇಜು ವಿದ್ಯಾರ್ಥಿಗಳು ಶುಕ್ರವಾರ ಎಬಿವಿಪಿ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಅವರಣದಿಂದ ಮೆರವಣಿಗೆ ಹೋರಟ ನೂರಾರು ವಿದ್ಯಾರ್ಥಿಗಳು ಹಳೇ ಬಸ್ ನಿಲ್ದಾಣ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಆಗ್ರಹ: ಈ ಸಂದರ್ಭದಲ್ಲಿ ಮಾತನಾಡಿದ ನಾನಾ ವಿದ್ಯಾರ್ಥಿ ಮುಖಂಡರು, ವೃತ್ತಿ ಶಿಕ್ಷಣ ಪ್ರವೇಶ 2006ರ ಕಾಯ್ದೆ ಅನುಷ್ಠಾನಕ್ಕೆ ತರುತ್ತಿರುವುದು ದುರದೃಷ್ಟಕರ. ಈ ಕಾಯ್ದೆ ಜಾರಿಯಾದರೆ ಪ್ರತಿಭವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುವುದು ಖಂಡಿತ ಆದ್ದರಿಂದ 2006 ವೃತ್ತಿ ಶಿಕ್ಷಣ ಕಾಯ್ದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ನೇತೃತ್ವವನ್ನು ಎಬಿವಿಪಿ ನಗರ ಕಾರ್ಯದರ್ಶಿ ವಿಕ್ರಂ, ಬಿಂದು, ಮಹದೇವ್, ತಿಲಕ್, ಕಾರ್ತಿಕ್, ಸಂತೋಷ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement