ಅರಕಲಗೂಡಲ್ಲಿ ಸಂತಾಪ
ಅರಕಲಗೂಡು: ಜಿಎಸ್ಎಸ್ ನಿಧನಕ್ಕೆ ತಾಲೂಕು ಕಚೇರಿ ಆವರಣದಲ್ಲಿ ಸಂತಾಪ ಸೂಚಕ ಸಭೆ ನಡೆಯಿತು. ರಾಷ್ಟ್ರೀಯ ಆಡಳಿತ ಸೇವೆಯ ತರಬೇತಿ ಅಧಿಕಾರಿ ಹಾಗೂ ಪ್ರಭಾರಿ ತಹಸೀಲ್ದಾರ್ ರಾಮಚಂದ್ರನ್, ಗ್ರೇಡ್ 2 ತಹಸೀಲ್ದಾರ್ ಜಗದೀಶ್, ಬಿಇಒ ಬಿ. ರೇವಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ಬಾಬು,ಎಂಜಿನಿಯರ್ ಕವಿತ ಮುಂತಾದವರು ಪಾಲ್ಗೊಂಡಿದ್ದರು.