ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು-ನಾಳೆ ಕನಕೋತ್ಸವ, ಕನ್ನಡೋತ್ಸವ, ಸಾಮೂಹಿಕ ವಿವಾಹ

Rashmi Kasaragodu
Updated On : 25 Dec 2013, 1:49 am

ಹೊಳೆನರಸೀಪುರ: ಇಂಟರ್ ನ್ಯಾಷನಲ್ ಕನಕದಾಸ ಮಿಷನ್(ಇಂಡಿಯಾ) ಆಶ್ರಯದಲ್ಲಿ ಡಿ.25ಮತ್ತು 26 ರಂದು ಕನಕೋತ್ಸವ, ಕನ್ನಡೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ತಾಲೂಕಿನ ಶ್ರವಣೂರು ಗ್ರಾಮದಲ್ಲಿನ ಸದ್ಗುರು ಸದಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೋಡೀಹಳ್ಳಿ ನಂಜುಂಡೇಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.25ರಂದು ಕನಕೋತ್ಸವ ಹಾಗೂ ಕನ್ನಡೋತ್ಸವ ಉದ್ಘಾಟನೆಯನ್ನು ಮೈಸೂರಿನ ಮಾಜಿ ಮೇಯರ್ ಧ್ರುವಕುಮಾರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಚ್.ಎಂ.ರೇವಣ್ಣ, ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ್, ಶಾಸಕ  ಎ.ಮಂಜು, ಮೈಸೂರು ಸಂಸದ ಎಚ್.ವಿಶ್ವನಾಥ್ ಭಾಗವಹಿಸುವರು. ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗ ವಿಭಾಗದ ನಿರ್ದೇಶಕ ಪ್ರೊ. ಸಿ.ನಾಗಣ್ಣ, ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ.ಕೆ.ಎಸ್.ಕಟಗಿ, ಗದಗದ ಶಿಕ್ಷಕ ಎಸ್.ಬಿ.ದೊಡ್ಡ ಮೊದಲಾದವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಿ.26ರಂದು ಕೋಡಿಹಳ್ಳಿ ಗ್ರಾಮದಲ್ಲಿನ ಗ್ರಾಮ ದೇವರ ಉತ್ಸವ, ಸರಳ ಸಾಮೂಹಿಕ ವಿವಾಹ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಧಾನಪರಿಷತ್ ಸದಸ್ಯ  ಸಿ.ಎಚ್.ವಿಜಯಶಂಕರ್ ಉದ್ಘಾಟಿಸಲಿದ್ದು, ಬೆಂಗಳೂರಿನ ಸದಾನಂದ ಬಾಬಾ ಮಂಡಳಿಯ ಅಧ್ಯಕ್ಷರು ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡಕಬ್ಬಳ್ಳಿ ರಂಗೇಗೌಡ  ಅಧ್ಯಕ್ಷತೆ ವಹಿಸುವರು. ಮೈಸೂರು ಜಿಪಂ ಅಧ್ಯಕ್ಷ ಎಂ.ಮಹದೇವ್ ಭಾಗವಹಿಸಲಿದ್ದಾರೆ. ಕೆಪಿಸಿಸಿ ಸದಸ್ಯ ಪುಟ್ಟೇಗೌಡ, ಹಳ್ಳಿಮೈಸೂರು ಹೋಬಳಿ ರೈತ ಸಂಘದ ಸಂಚಾಲಕ ಗಣೇಶ್, ರೈತ ಸಂಘದ ನಾಗರಾಜ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement