ಕನ್ನಡ ಸಾರಸ್ವತ ಲೋಕಕ್ಕೆ ಅನನ್ಯ ಕೊಡುಗೆ
ಹಾಸನ: ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ನಿಧನರಾದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘವನದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು ಜಿ.ಎಸ್.ಶಿವರುದ್ರಪ್ಪನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕೆಲ ನಿಮಿಷ ಮೌನಾಚರಿಸಿ ಗೌರವ ಸಲ್ಲಿಸಲಾಯಿತು. ಗಣ್ಯರು ಮಾತನಾಡಿ ಸಜ್ಜನಿಕೆಯ ಮಾದರಿ ಕವಿಯ ಬಗ್ಗೆ ಬಣ್ಣಿಸಿದರು. ಕನ್ನಡ ನಾಡಿನ ಆಸ್ತಿಯಾಗಿದ್ದ ಅವರ ಸಾವಿಗೆ ಕಂಬನಿ ಮಿಡಿಯಿತು.
ಕಸಾಪ ಅಧ್ಯಕ್ಷ ಎಚ್.ಎಲ್.ಜನಾರ್ದನ್, ಸಾಹಿತಿ ಜ.ಹೋ.ನಾರಾಯಣಸ್ವಾಮಿ, ಗೊರೂರು ಶಿವೇಶ್, ಗಣೇಶ್ ಉಡುಪ, ಲೇಖಕರ ಬಳಗದ ಅಧ್ಯಕ್ಷೆ ನಿರ್ಮಲ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ.ರಮೇಶ್, ಸಮಾಜ ಸೇವಕ ಪ್ರಸಾದ್ ಇತರರು ಇದ್ದರು.