ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಾಡಾನೆ ಕಾಡಿಗೆ ಅಟ್ಟುವ ಕಾರ್ಯಾಚರಣೆ ಚುರುಕು

Rashmi Kasaragodu
Updated On : 25 Dec 2013, 1:47 am

ಕ.ಪ್ರ.ವಾರ್ತೆ   ರಾಮನಾಥಪುರ   ಡಿ. 24
ಇತ್ತೀಚೆಗೆ ತರಗಳಲೆ ಕಾರಗಲ್, ಅರೆಗಲ್, ಸುಳುಗೋಡು ಭಾಗಗಳಲ್ಲಿ ರೈತರಿಗೆ ಮತ್ತು ಜನಸಾಮಾನ್ಯರು ಕಾಡಾನೆಗಳ ಭೀತಿಯಲ್ಲಿ ಜೀವ ಕೈಯಲ್ಲಿ ಹಿಡಿದು ಜೀವನ ನಡೆಸುತ್ತಿದ್ದು, ಇತ್ತೀಚೆಗೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಚುರುಕು ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಅಟ್ಟುವ ಕೆಲಸದಲ್ಲಿ ಮಂಗಳವಾರ ನಿರತರಾಗಿದ್ದು, ಈ ಭಾಗದ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ.
ಬತ್ತ, ಮೆಕ್ಕೆ ಜೋಳ, ತರಕಾರಿ, ಶುಂಠಿ, ರಾಗಿ ಬೆಳೆಗಳನ್ನು ಕಾಡಾನೆಗಳು ನಾಶಪಡಿಸಿದ್ದು, ಈ ಭಾಗದಲ್ಲಿ ಒಂಟಿ ಸಲಗವೊಂದು ಸಂಚರಿಸುತ್ತಿದ್ದು, ಅತಿ ಅಪಾಯಕಾರಿಯಾಗಿದೆ. ಇದನ್ನು ಕಾಡಿಗೆ ಅಟ್ಟಲು ವಲಯ ಅರಣ್ಯಾಧಿಕಾರಿ ಹಡ್ಲಗಿರಿ ನೇತೃತ್ವದಲ್ಲಿ ಸಾಕಷ್ಟು ಪ್ರಯತ್ನ ಸಾಗಿದೆ. ಅರಣ್ಯ ಪ್ರದೇಶವಾದ್ದರಿಂದ ಇಲಾಖೆಯವರ ಸಹಕಾರವು ಅತ್ಯಗತ್ಯವಾಗಿದೆ.
ಈ ಸಂದರ್ಭದಲ್ಲಿ ಉಪವಲಯ ಅರಣ್ಯಾಧಿಕಾರಿ ಎಚ್.ಬಿ.ಮಲ್ಲಯ್ಯ, ಅರಣ್ಯ ರಕ್ಷಕ ಕೆ.ಬಿ.ಮಂಜುನಾಥ್, ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಎಚ್.ಇ.ಜಗದೀಶ್ ಹಾಗೂ ಗ್ರಾಮಸ್ಥರಾದ ಚಂದ್ರಶೇಖರ್, ಪರಮೇಶ್, ಪ್ರದೀಪ್, ರಘು, ಧರಣೇಶ್, ಅಶೋಕ್, ರವಿಚಂದ್ರ ಇದ್ದರು.
ಅರೆಗಲ್ಲು ಗ್ರಾಮ ಇನ್ನು ಹಲವು ಗ್ರಾಮಗಳಿಗೆ ಆನೆಗಳು ಗ್ರಾಮಗಳಿಗೆ ನುಗ್ಗದಂತೆ ಬೆದರಿಸಿ ಓಡಿಸಲು ಪಟಾಕಿ, ಟಾರ್ಚ್ಲೈಟ್ಗಳನ್ನು ಅರಣ್ಯ ಇಲಾಖೆ ನೀಡಿದೆ.  ಗ್ರಾಮಸ್ಥರ ಸಹಕಾರದಿಂದ ಆನೆಗಳನ್ನು ಕಾಡಿಗಟ್ಟುವ ಕೆಲಸ ಚುರುಕುಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement