ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕುಮಾರಸ್ವಾಮಿ ಸ್ವಾರ್ಥ ಬಿಟ್ಟರೆ ಅಭಿವೃದ್ಧಿಗೆ ಕೈ ಜೋಡಿಸಲು ಸದಾ ಸಿದ್ಧ: ವಿಶ್ವನಾಥ್

Rashmi Kasaragodu
Updated On : 25 Dec 2013, 1:50 am

ಸಕಲೇಶಪುರ: ಶಾಸಕ ಎಚ್.ಕೆ. ಕುಮಾರಸ್ವಾಮಿ ಸ್ವಾರ್ಥ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಮುಂದಾದರೆ ಅವರೊಂದಿಗೆ ಕೈಜೋಡಿಸಲು ಸದಾ ಸಿದ್ದವಿರುವುದಾಗಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಹೇಳಿದರು.
 ಪ್ರವಾಸಿಮಂದಿರದಲ್ಲಿ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಯಾವುದೆ ಕಾಳಜಿ ಇಲ್ಲದ ಶಾಸಕರಿಂದಾಗಿ ಸುಬ್ರಮಣ್ಯ-ಜನ್ನಾಪುರ ರಸ್ತೆ ರದ್ದಾಯಿತು. ನಮ್ಮ ಅವಧಿಯಲ್ಲಿ ಗ್ರಾಮೀಣ ಭಾಗಕ್ಕೆ  ಮಂಜೂರಾಗಿದ್ದ 3 ಆಸ್ಪತ್ರೆಗಳು ಸಹ ರದ್ದಾಗಿವೆ.  ಹೀಗೆ ನಮ್ಮ ಅವಧಿಯಲ್ಲಿ ಮಂಜೂರಾಗಿರುವ ಹಲವು ಮಹತ್ವದ ಯೋಜನೆಗಳು ಶಾಸಕರ ಸೋಮಾರಿತನದಿಂದಾಗಿ ವಾಪಸ್ಸಾಗಿವೆ ಎಂದು ದೂರಿದರು.
 ಈ ಬಾರಿ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಗೆ ಬಂದಿರುವ ಹಣಕ್ಕೆ ಇದುವರಗೆ ಅಂದಾಜುಪಟ್ಟಿ ಸಹ ಸಿದ್ದಪಡಿಸಲಾಗಿಲ್ಲ. ಕೇವಲ ತಮ್ಮ ಸ್ವಂತ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಶಾಸಕರು ತ್ರೈಮಾಸಿಕ ಸಭೆಯನ್ನು ಕೆಲವೇ ನಿಮಿಷದಲ್ಲಿ ಮುಗಿಸಿ ಎದ್ದು ಹೋದರೆ ತಾಲೂಕಿನ ಅಭಿವೃದ್ಧಿ ಹೇಗೆ ಸಾಧ್ಯ ಎಂದರು.
 ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹಾಕಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿ ಸಾಧಿಸಬೇಕು. ಇದಕ್ಕೆ ನಾವು ಸಹ ಬೆಂಬಲ ನೀಡುತ್ತೇವೆ ಎಂದು ಹೇಳಿದರು. ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಹೆಚ್ಚಿನ ಭಾಗ ನಮ್ಮ ಆಡಳಿತದ ಅವಧಿಯಲ್ಲಿ ಮಂಜೂರಾಗಿವೆ  ಎಂದು ಹೇಳಿದರು. ಪುರಸಭೆ ಮಾಜಿ ಅಧ್ಯಕ್ಷ  ಭಾಸ್ಕರ್ಶೆಟ್ಟಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement